ಮೊಗ್ರಾಲ್ ಪುತ್ತೂರು: ಅಡ್ಕತ್ತ ಬೈಲು ಕೋಟವಳಪ್ಪ್‌ನಲ್ಲಿ ಅಮ್ಮ ಭಾರತ್ ಚಾರಿಟಿ ಫೌಂಡೇಶನ್ ನಿರ್ಮಿಸಿ ನೀಡುವ ಮನೆಗೆ ದಾರಂದ ಮುಹೂರ್ತ ನಿನ್ನೆ ಜರಗಿತು. ಉದ್ಯಮಿ, ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ವಿಜಯನ್ ರಾಮನ್ ಕರಿಪ್ಪೊಡಿ, ಖತ್ತರ್ ಕೃಷ್ಣನ್ ಕುನ್ನಿಲ್ ನೀರ್ಚಾಲ್ ಇವರ ಉಪಸ್ಥಿತಿಯಲ್ಲಿ ನಡೆಯಿತು. ಚಾರಿಟಿ ಫೌಂಡೇಶನ್ ಅಧ್ಯಕ್ಷ ಗಣೇಶ್ ಅರಮಂಗಾನಂ, ತಳಂಗರೆ ಪಿಲಿಕುಂಜೆ ಭಗವತೀ ಸೇವಾ ಸಂಘದ ಅಧ್ಯಕ್ಷ ಎನ್. ಸತೀಶನ್ ಮನ್ನಿಪ್ಪಾಡಿ, ಮೊಗ್ರಾಲ್ ಪುತ್ತೂರು ಪಂ. ಸದಸ್ಯೆ ಪ್ರಮೀಳಾ ಮಜಲ್, ಫೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ಗಣೇಶ್ ಮಾವಿನಕಟ್ಟೆ, ಕೋಶಾಧಿಕಾರಿ ಸುರೇಶ್ ಬಾಬು ಕಾನತ್ತೂರು, ಟ್ರಸ್ಟ್ ಸದಸ್ಯೆ ಶರಣ್ಯ ಗಣೇಶ್ ಕೋಟೆಕಣಿ, ಗಣೇಶ್ ಅಡ್ಕತ್ತಬೈಲು, ಪದ್ಮನಾಭ ನಾಯ್ಕ್, ರಾಜನ್ ಪೂಚಕ್ಕಾಡ್ ಭಾಗವಹಿಸಿದರು. ಕೋಟೆವಳಪ್ ಸಾವಿತ್ರಿಯವರ ಕುಟುಂಬಕ್ಕೆ ಮನೆ ನಿರ್ಮಿಸಿ ನೀಡಲಾಗುವುದು.
