ಅಯೋಧ್ಯೆಯಲ್ಲಿ ‘ಒಂಟಿ-ತೋಳ’ ಮಾದರಿ ದಾಳಿಗೆ ಸ್ಕೆಚ್: ಮೂವರು ಅಲ್ಖೈದಾ ಉಗ್ರರ ಸೆರೆ
ಅಯೋಧ್ಯೆ: ಅಯೋಧ್ಯೆಯಲ್ಲಿ ಜ.೨೨ರಂದು ಪ್ರಾಣಪ್ರತಿಷ್ಠೆ ನಡೆಯಲಿ ರುವಂತೆಯೇ ಆ ಪರಿಸರದಲ್ಲಿ ‘ಲೋನ್ -ವೂಲ್ಫ್’ (ಒಂಟಿ ತೋಳ) ಮಾದರಿ ದಾಳಿಗೆ ಸ್ಕೆಚ್ ಹಾಕಿಕೊಂಡಿದ್ದ ಅಲ್ ಖೈದಾ ಭಯೋತ್ಪಾದಕ ಸಂಘಟನೆಗೆ ಸೇರಿದ ಮೂವರು ಉಗ್ರರನ್ನು ಗುಪ್ತಚರ ವಿಭಾಗದ ಸಹಾಯದೊಂದಿಗೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಉಗ್ರರು ಅಲ್ಖೈದಾ ಭಯೋತ್ಪಾದಕ ಸಂಘಟನೆಯ ಚಟು ವಟಿಕೆಗಳ ಬಗ್ಗೆ ಪಾಲುದಾರ ಸಂಸ್ಥೆಗಳೊಂ ದಿಗೂ ಭಯೋತ್ಪಾದನೆ ಸಂಚುಗಳ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ಎಂಬುವುದು ತನಿಖೆಯಲ್ಲಿ ಬಹಿರಂಗ ಗೊಂಡಿದೆ. ಬಂಧಿತರು ಕೈಪಿಡಿಯೊಂ ದನ್ನು ಹೊಂದಿದ್ದರು. ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ (ಐಸಿಸ್)ಗೆ ಭಾರತದ ಯುವಕರನ್ನು ಸೆಳೆಯುವಂತೆ ಮಾಡಲು ಹಾಗೂ ಅವರನ್ನು ದಾರಿ ತಪ್ಪಿಸಿ ಸಂಭಾವ್ಯ ದಾಳಿಗೆ ಅವರನ್ನು ಆಮೂಲಾಗ್ರವನ್ನಾ ಗಿಸಲು ಸಾಮಾಜಿಕ ಮಾಧ್ಯಮಗಳ ಮೂಲಕ ಹಲವು ಯುವಕರನ್ನು ಇವರು ಈಗಾಗಲೇ ಸಂಪ ರ್ಕಿಸಿರುವುದನ್ನೂ ಪತ್ತೆಹಚ್ಚಲಾಗಿದೆ ಯೆಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಉಗ್ರರು ಅಯೋಧ್ಯೆ ಮತ್ತು ಇತರೆಡೆಗಳಲ್ಲಿ ಲೋನ್ ವೂಲ್ಪ್ ದಾಳಿಗೆ ಸಂಚು ಹಾಕಿಕೊಂಡಿರುವುದನ್ನು ಗುಪ್ತಚರ ವಿಭಾಗ ನಡೆಸಿದ ತನಿಖೆಯಲ್ಲಿ ಬೇಧಿಸಿದೆ. ಜನವರು ೨೨ರಂದು ಅಯೋಧ್ಯೆಯಲ್ಲಿ ಲಕ್ಷಾಂತರ ಮಂದಿ ಬಂದು ಸೇರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಅಲ್ಲಿಗೆ ಒಂಟಿ ತೋಳದಹಾಗೆ ಏಕಾಂಗಿಯಾಗಿ ನುಗ್ಗಿ ಸ್ಪೋಟ ನಡೆಸುವ ರೀತಿಯ ತರಬೇತಿಯನ್ನು ಈ ಉಗ್ರರಿಗೆ ಅಲ್ಖೈದಾ ನೀಡಿತ್ತು. ಈ ಸಂಚಿನಲ್ಲಿ ಐಸಿಸ್ ಹ್ಯಾಂಡ್ಲರ್ ಆಗಿರುವ ಅಬೂ ಮೊಹಮ್ಮದ್ ಎಂಬ ಉಗ್ರನೂ ಶಾಮೀಲಾಗಿದ್ದಾನೆ ಎಂದು ಕೇಂದ್ರ ಗುಪ್ತಚರ ವಿಭಾಗ ಬಹಿರಂಗಪಡಿಸಿದೆ. ಅಬೂ ಮುಹಮ್ಮದ್ ಇನ್ಸ್ಟಾಗ್ರಾಂ ಚ್ಯಾನೆಲ್ವೊಂದನ್ನು ಹೊಂದಿದ್ದು, ಅದರ ಮೂಲಕ ‘ಲೋನ್ ಮುಜಾಹಿದ್ ಪ್ಯಾಕೆಟ್ ಬುಕ್’ ಎಂಬ ಪುಸ್ತಕವನ್ನು ಈಗಾಗಲೇ ಹಲವರಿಗೆ ತಲುಪಿಸಿದ್ದಾನೆ. ಈ ಪುಸ್ತಕದ ಮೂಲಕ ಜಿಹಾದನ್ನು ಪ್ರಧಾನ ಗುರಿಯನ್ನಾಗಿಸಲಾಗಿದೆ. ಜಿಹಾದ್ ನಡೆಸುವುದು ಮತ್ತು ನಾಸ್ತಿಕರನ್ನು ತೊಡೆದುಹಾಕುವುದು ಇದರ ಉದ್ದೇಶವಾಗಿದೆಯೆಂದು ಗುಪ್ತಚರ ವಿಭಾಗ ಹೇಳಿದೆ.
ನಿಲ್ಲಿಸಲಾದ ವಾಹನಗಳಿಗೆ ಬೆಂಕಿ ಹಚ್ಚುವುದು ಅಥವಾ ಬಾಂಬ್ ಇರಿಸಿ ಸ್ಫೋಟಿಸುವುದು, ರಸ್ತೆ ಅಪಘಾತಗಳನ್ನು ಉಂಟುಮಾಡುವುದು, ಕಟ್ಟಡಗಳನ್ನು ಕೆಡಹುವುದು ಮತ್ತು ಐಇಡಿ, ರಿಮೋಟ್ ಕಂಟ್ರೋಲ್ ಸ್ಫೋಟಗಳೂ ಸೇರಿದಂತೆ ಇತರ ಮಾರಣಾಂತಿಕ ಸ್ಫೋಟಗಳನ್ನು ನಡೆಸುವುದೂ ಒಳಗೊಂಡಂತೆ ಇತರ ಹಲವು ಭಯೋತ್ಪಾದಕ ವಿಧಾನಗಳನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ.
ಅಲ್ಖೈದಾ ಲೋನ್ ಮುಜಾ ಹಿದ್ ಪ್ಯಾಕೆಟ್ ಬುಕ್ನ್ನು ೨೦೧೩ರಲ್ಲಿ ಮೊದಲು ಪ್ರಕಟಿಸಲಾಗಿತ್ತು. ಅಂದಿನಿಂದ ಅಲ್ಖೈದಾ ಅದರ ಹಲವಾರು ಆವೃತ್ತಿಗಳನ್ನು ಆನ್ಲೈನ್ ಪ್ರಚಾರದ ಮೂಲಕ ಒಂಟಿ ತೋಳದ ಭಯೋ ತ್ಪಾದನೆಯನ್ನು ಸುಲಭಗೊಳಿಸುವ ಉದ್ದೇಶದಿಂದ ಪ್ರಕಟಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಉಗ್ರರನ್ನು ಸೆರೆಹಿಡಿದಿರುವ ಹಿನ್ನೆಲೆಯಲ್ಲಿ ಅಯೋಧ್ಯೆ ಮಾತ್ರವಲ್ಲದೆ ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಲ್ಲೂ ಕಟ್ಟೆಚ್ಚರ ಘೋಷಿಸಲಾಗಿದೆ.