ಅಯೋಧ್ಯೆ: ಪ್ರಾಣ ಪ್ರತಿಷ್ಠಾಪನಾ ವಿಧಿಗಳಿಗೆ ಚಾಲನೆ
ಅಯೋಧ್ಯೆ: ಅಯೋಧ್ಯೆ ಶ್ರೀರಾಮ ಕ್ಷೇತ್ರದಲ್ಲಿ ಈ ತಿಂಗಳ ೨೨ರಂದು ನಡೆಯಲಿರುವ ಪ್ರಾಣ ಪ್ರತಿಷ್ಠೆಯಂಗವಾಗಿ ವಿವಿಧ ವೈದಿಕ ಕಾರ್ಯಕ್ರಮಗಳಿಗೆ ಇಂದು ಚಾಲನೆ ನೀಡಲಾಗಿದ. ಇಂದಿನಿಂದ ಮುಂದಿನ ಏಳು ದಿನಗಳು ಪ್ರಾಣ ಪ್ರತಿಷ್ಠಾಪನಾ ವಿಧಿಗಳನ್ನು ವಿವಿಧ ಹಂತಗಳಲ್ಲಿ ನೆರವೇರಿಸಲಾಗುವುದು. ವಿಗ್ರಹ ಪ್ರತಿಷ್ಠಾಪನೆ ನಡೆಸುವ ಮುಂಚಿ ತವಾಗಿ ೧೦೮ ರೀತಿಯ ದ್ರವ್ಯಗಳ ಅಭಿಷೇಕ ನಡೆಸಲಾಗುವುದು. ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆ (ಪಂಚಾಮೃತ), ಹಣ್ಣುಗಳು, ವಿವಿಧ ಹೂವುಗಳಿಂದ ಅಭಿಷೇಕ ನಡೆಸಿ ವಿಗ್ರಹವನ್ನು ಪವಿತ್ರಗೊಳಿಸಲಾ ಗುವುದು. ವೈದಿಕ ವಿಧಾನಗಳ ಅಂಗವಾಗಿ ಇಂದು ದಶವಿಧ ಸ್ನಾನ ನಡಯಲಿದೆ. ನಾಳೆ ಗಣೇಶ, ಅಂಬಿಕಾಪೂಜೆ, ೧೮ರಂದು ವಾಸ್ತು, ವರುಣ ಪೂಜೆ, ೧೯ರಂದು ನವಗ್ರಹ ಸ್ಥಾಪನೆ, ೨೦ರಂದು ವಾಸ್ತುಶಾಂತಿ, ಅನ್ನಾಧಿವಾಸ, ೨೧ರಂದು ಶಯ್ಯಾಧಿವಾಸ, ೨೨ರಂದು ಪೂಜೆ ಹಾಗೂ ಪ್ರಾಣ ಪ್ರತಿಷ್ಠೆ ನಡೆಸಲಾಗು ವುದು. ೨೨ರಂದು ಮೃಗಶಿರಾ ನಕ್ಷತ್ರವಾ ಗಿರುವುದು. ಅಂದು ಮಧ್ಯಾಹ್ನ ೧೨.೧೫ರಿಂದ ೧೨.೪೫ರ ಮಧ್ಯೆ ಮುಹೂರ್ತದಲ್ಲಿ ವಿಗ್ರಹವನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಿ, ಪ್ರಾಣ ತುಂಬಲಾಗುವುದು. ಅಯೋಧ್ಯೆ ಶ್ರೀರಾಮ ಕ್ಷೇತ್ರದಲ್ಲಿ ಪ್ರತಿಷ್ಠಾಪನೆ ಮಾಡುವ ರಾಮವಿಗ್ರಹ ೧೮ರಂದು ಕ್ಷೇತ್ರಕ್ಕೆ ತಲುಪಲಿದೆ.
ಮೈಸೂರಿನ ಶಿಲ್ಪಿ ಯೋಗಿರಾಜ್ ಕೆತ್ತಿದ ಶಿಲ್ಪವನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ನಡೆಸಲಾಗುವುದು. ಶ್ರೀರಾಮ ವಿಗ್ರಹದ ಪ್ರಾಣ ಪ್ರತಿಷ್ಠೆಯ ಮರುದಿನದಿಂದಲೇ ರಾಮ್ ಲಲ್ಲಾನ ದರ್ಶಕ್ಕೆ ಸಾರ್ವ ಜನಿಕರಿಗೆ ಅವಕಾಶ ನೀಡಲಾಗು ವುದೆಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪಾತ್ ರಾಯ್ ತಿಳಿಸಿದ್ದಾರೆ.