ಅರಿಕ್ಕಾನ ಸಿದ್ದಿಕುಡಾಲು ದೈವಸ್ಥಾನದಲ್ಲಿ ಸಾನ್ನಿಧ್ಯ ಪ್ರತಿಷ್ಠೆ ಇಂದಿನಿಂದ
ಪೈವಳಿಕೆ: ಅರಿಕ್ಕಾನ ಸಿದ್ದಿ ಕುಡಾಲ್ ಶ್ರೀ ನಾಗ, ಧೂಮಾವತಿ ಮತ್ತು ಪರಿವಾರ ದೈವಗಳ ಸಾನಿಧ್ಯ ಪುನ: ಪ್ರತಿಷ್ಠೆ ಇಂದಿನಿAದ ಮಾ.3ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಇಂದು ಸಂಜೆ 5ರಿಂದ ನಾಗ ಸಂಸ್ಕಾರ, ದಹನ ಕ್ರಿಯೆ, ರಾತ್ರಿ ದುರ್ಗಾನಮಸ್ಕಾರ ಪೂಜೆ, ನಾಳೆ ಬೆಳಿಗ್ಗೆ 8.30ರಿಂದ ನಾಗಬಲಿ ಹೋಮ, ಆಶ್ಲೇಷ ಬಲಿ, ಬ್ರಹ್ಮಚಾರಿ ಆರಾಧನೆ, ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ, ಸಂಜೆ 6ರಿಂದ ಸ್ಥಳ ಶುದ್ದಿ, ಪ್ರಾಸಾದ ಶುದ್ದಿ ಸಹಿತ ವಿವಿಧ ಕಾರ್ಯಕ್ರಮಗಳು, 2ರಂದು ಗಣಹೋಮ, ಕಲಶ ಪೂಜೆ, 11.25ರ ಮುಹೂರ್ತದಲ್ಲಿ ನಾಗ ಪ್ರತಿಷ್ಠೆ, ಕಲಶಾಭಿಷೇಕ, ನಾಗತಂಬಿಲ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಧೂಮಾವತಿ ಭಂಡಾರ ಮನೆಯಲ್ಲಿ ಶುದ್ದಿ, ವಾಸ್ತು ಪೂಜೆ, ಮಂಡಲ ನಿರ್ಮಾಣ ಕಲಶ ಪೂಜೆ, ಆಧಿವಾಸ ಹೋಮ, 3ರಂದು ಬೆಳಿಗ್ಗೆ 7.45ಕ್ಕೆ ಧೂಮಾವತಿ, ಕೊರತಿ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಮಹಾಪೂಜೆ, ಧೂಮಾವತಿ ಕಟ್ಟೆಯಲ್ಲಿ ಕಲಶ ಪೂಜೆ, ಶಿಲಾ ಪ್ರತಿಷ್ಠೆ, ಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 5ಕ್ಕೆ ಭಂಡಾರ ಬರುವುದು, 6ರಿಂದ ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವ, ರಾತ್ರಿ ಅನ್ನ ಸಂತರ್ಪಣೆ, ಭಂಡಾರ ನಿರ್ಗಮಿಸಲಿದೆ.