ಅಲ್ಯುಮಿನಿಯಂ ಫ್ಯಾಬ್ರಿಕೇಶನ್ ಕಾರ್ಮಿಕ ಕಟ್ಟಡದಿಂದ ಬಿದ್ದು ಮೃತ್ಯು

ಉಪ್ಪಳ: ಅಲ್ಯುಮಿನಿಯಂ ಫ್ಯಾಬ್ರಿ ಕೇಶನ್ ಕಾರ್ಮಿಕ ಕೆಲಸ ವೇಳೆ ಕಟ್ಟಡದಿಂದ ಬಿದ್ದು ಮೃತಪಟ್ಟನು.

ಉತ್ತರಪ್ರದೇಶದ ಬಹದ್ದೂರ್ ಪುರ್ ನಿವಾಸಿಯಾದ ಅಮೀನ್ ಚೌಹಾಣ್ ಎಂಬವರ ಪುತ್ರ ಸರ್ವೇಶ್ ಚೌಹಾಣ್ (19) ಮೃತಪಟ್ಟ ದುರ್ದೈ ವಿ. ಮೊನ್ನೆ ಸಂಜೆ ಮಜೀರ್‌ಪಳ್ಳದಲ್ಲಿ ಘಟನೆ ನಡೆದಿದೆ. ಅಲ್ಲಿನ ಕಟ್ಟಡ ವೊಂದರಲ್ಲಿ ಫ್ಯಾಬ್ರಿಕೇಶನ್ ಕೆಲಸ ವೇಳೆ ಸರ್ವೇಶ್ ಚೌಹಾಣ್ ಕೆಳಕ್ಕೆ ಬಿದ್ದಿದ್ದರು. ಗಂಭೀರ ಗಾಯಗೊಂಡ ಅವರನ್ನು ಕೂಡಲೇ ದೇರಕಟ್ಟೆಯ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಊರಿಗೆ ಕೊಂಡೊಯ್ಯಲಾಯಿತು. ಘಟನೆ ಬಗ್ಗೆ ಮಂಜೇಶ್ವರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಸಿಕೊಂಡಿದ್ದಾರೆ.

You cannot copy contents of this page