ಅಳತೆ, ತೂಕ ಇಲಾಖೆಯಿಂದ ವ್ಯಾಪಕ ದಾಳಿ: ೭೭೭ ಸಂಸ್ಥೆಗಳ ವಿರುದ್ಧ ಕೇಸು
ಕಾಸರಗೋಡು: ಅಳತೆ ಮತ್ತು ತೂಕ (ಲೀಗಲ್ ಮೆಟ್ರೋಲಜಿ) ಇಲಾಖೆಯ ವಿಶೇಷ ತಂಡ ಕಾಸರಗೋಡು, ಕಣ್ಣೂರು, ವಯನಾಡು, ಕಲ್ಲಿಕೋಟೆ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಾಗಿ ಒಟ್ಟು ೩೩೩೭ ವ್ಯಾಪಾರ ಸಂಸ್ಥೆಗಳಿಗೆ ಮಿಂಚಿನ ದಾಳಿ ಮಾಡಿ ಪರಿಶೀಲನೆ ನಡೆಸಿದೆ. ಪರಿಶೀಲನೆಯಲ್ಲಿ ಕಾನೂ ನು ಉಲ್ಲಂಘನೆ ನಡೆಸಿರುವುದಾಗಿ ಪತ್ತೆಹಚ್ಚಲಾದ ೭೭೭ ವ್ಯಾಪಾರ ಸಂಸ್ಥೆಗಳ ವಿರುದ್ಧ ಕೇಸು ದಾಖಲಿಸ ಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ದಾಳಿಗೆ ಸಂಬಂಧಿಸಿ ೩೦,೩೪,೫೦೦ ರೂ. ಜುಲ್ಮಾನೆ ಯನ್ನು ವಸೂಲಿ ಮಾಡಲಾಗಿದೆ ಎಂದು ಲೀಗಲ್ ಮೆಟ್ರೋಲಜಿ ಇಲಾಖೆಯ ಉತ್ತರವಲಯ ಜೊಂಟ್ ಕಂಟ್ರೋಲರ್ ರಾಜೇಶ್ ಸಾಮ್ ತಿಳಿಸಿದ್ದಾರೆ. ಇದರ ಹೊರ ತಾಗಿ ಸಕಾಲದಲ್ಲಿ ಇಲಾಖೆಯ ಮೊಹರು ಲಗತ್ತಿಸಿದ ಅಳತೆ ಮತ್ತು ತಕ್ಕಡಿ ಉಪಕರಣಗಳನ್ನೂ ಹಲವು ವ್ಯಾಪಾರ ಸಂಸ್ಥೆಗಳಲ್ಲಿ ಪತ್ತೆಹಚ್ಚ ಲಾಗಿದೆ.
ಅದಕ್ಕೆ ಸಂಬಂಧಿಸಿ ೬೨೬ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.