ಅಸೌಖ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಬಸ್ ಕಾರ್ಮಿಕ ಸಾವು
ಮಾನ್ಯ: ಅಸೌಖ್ಯದಿಂದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದ ಖಾಸಗಿ ಬಸ್ಸು ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಮಾನ್ಯದ ಲಕ್ಷಂವೀಡ್ ಕಾಲನಿಯ ನಾರಾಯಣ- ಗಿರಿಜಾ ದಂಪತಿಯ ಪುತ್ರ ಅಭಿಲಾಷ್ ಎಂ.(೨೯) ಸಾವನ್ನಪ್ಪಿದ ಯುವಕ. ಇವರು ಕಾಸರಗೋಡು -ಆಲಂಪಾಡಿ- ಮಾನ್ಯ ರೂಟ್‌ನಲ್ಲಿ ಸಂಚರಿಸುವ ಖಾಸಗಿ ಬಸ್‌ನಲ್ಲಿ ಕ್ಲೀನರ್ ಆಗಿದ್ದರು. ಅಸೌಖ್ಯದ ನಿಮಿತ್ತ ಅವರನ್ನು ಕಾಸರಗೋಡಿನ ಆಸ್ಪತ್ರೆಯಲ್ಲೂ, ಬಳಿಕ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿ ಯಾಗದೆ ಅವರು ಕೊನೆಯು ಸಿರೆಳೆದರು. ಮೃತದೇಹವನ್ನು ಇಂದು ಬೆಳಿಗ್ಗೆ ಊರಿಗೆ ತರಲಾಯಿತು. ಮೃತರು ಹೆತ್ತವರ ಹೊರತಾಗಿ ಪತ್ನಿ ಸುಗಂಧಿ, ಸಹೋದರ ಅಭಿಜಿತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.