ಅಸೌಖ್ಯ: ನಿವೃತ್ತ ಅಧ್ಯಾಪಕ ನಿಧನ
ಮಂ ಜೇಶ್ವರ: ಮೂಲತಃ ಮೀಯ ಪದವು ನಿವಾಸಿ ಪ್ರಸ್ತುತ ಕೀರ್ತೇ ಶ್ವರದಲ್ಲಿ ವಾಸಿಸುತ್ತಿದ್ದ ನಿವೃತ್ತ ಅಧ್ಯಾಪಕ ಜಯಂತ (60) ನಿನ್ನೆ ಸಂಜೆ ದೇರಳ ಕಟ್ಟೆ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕೆಎಸ್‌ಟಿಎ ಮಂಜೇಶ್ವರ ಉಪಜಿಲ್ಲಾ ಸಮಿತಿ ಮಾಜಿ ಕೋಶಾಧಿಕಾರಿ, ಜಿಲ್ಲಾ ಲೈಬ್ರೆರಿ ಕೌನ್ಸಿಲ್ ಸದಸ್ಯ, ಮೀಯಪದವು ವಿದ್ಯಾವರ್ಧಕ ಶಾಲೆಯ ಹಳೆ ವಿದ್ಯಾರ್ಥಿ ಸಂಘ ಗ್ರಂಥಾಲಯದ ಸ್ಥಾಪಕ ಸದಸ್ಯ, ಕೆಎಸ್‌ಎಸ್‌ಪಿಯು ಮಂಜೇಶ್ವರ ಘಟಕ ಸದಸ್ಯ ಹಾಗೂ ಹಲವು ವಲಯಗಳಲ್ಲಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ಯೋಗಿತ (ಮೀಯ ಪದವು ಶಾಲೆಯಲ್ಲಿ ಅಧ್ಯಾಪಿಕೆ), ಮಕ್ಕಳಾದ ರವಿರಾಜ್, ಧನ್ಯ, ಸಹೋದರ ಚಂದ್ರಶೇಖರ, ಸಹೋದರಿ ಯರಾದ ಸುನಿತಾ, ವಸಂತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಕೆಎಸ್‌ಎಸ್‌ಪಿಯು ಮಂಜೇಶ್ವರ ಘಟಕ ಪದಾಧಿಕಾರಿಗಳಾದ ರವಿಚಂದ್ರ ಉದ್ಯಾವರ, ಶೀನಪ್ಪ ಪೂಜಾರಿ, ಪುಂಡಲೀಕ ನಾಯಕ್, ತುಳು ಅಕಾ ಡೆಮಿ ಅಧ್ಯಕ್ಷ ಕೆ.ಆರ್. ಜಯಾನಂದ, ಲೈಬ್ರೆರಿ ಕೌನ್ಸಿಲ್ ಸದಸ್ಯ ಹುಸೈನ್ ಮಾಸ್ತರ್, ಕೆಎಸ್‌ಟಿಎ ಜಿಲ್ಲಾಧ್ಯಕ್ಷ ಶ್ಯಾಂ ಭಟ್, ಅಧ್ಯಾಪಕರು ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.