ಬದಿಯಡ್ಕ: ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಗೃಹಿಣಿ ಮೃತಪಟ್ಟರು. ಕನ್ಯಪ್ಪಾಡಿ ಬಳಿಯ ಪಟ್ಟಾಜೆ ಎಂಬಲ್ಲಿನ ಯೋಗೀಶ್ರ ಪತ್ನಿ ರಮಣಿ (42) ಮೃತಪಟ್ಟವರು. ಅಸೌಖ್ಯ ಬಾಧಿಸಿದ್ದ ಇವರನ್ನು ಕಾಸರ ಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗಿಲ್ಲ. ಮೃತರು ಪತಿ, ಮಕ್ಕಳಾದ ಸಾಕ್ಷಿ, ಸುಜನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.