ಕಾಸರಗೋಡು: ಕ್ರಿಕೆಟ್ ಆಟ ನಡೆಯುತ್ತಿದ್ದ ವೇಳೆ ಲೈಟ್ ಆಫ್ ಮಾಡಿದ ಹೆಸರಲ್ಲಿ ಉಂಟಾದ ಘರ್ಷಣೆಯಲ್ಲಿ ಪ್ರಸ್ತುತ ಕ್ರೀಡಾಂಗಣದ ವಾಚ್‌ಮ್ಯಾನ್ ಮೇಲೆ ಒಂದು ತಂಡ ಹಲ್ಲೆ ನಡೆಸಿದ ಘಟನೆ ಉಳಿಯತ್ತಡ್ಕದಲ್ಲಿ ನಡೆದಿದೆ. ಉಳಿಯತ್ತಡ್ಕದ ಗ್ರೀನ್ ಫೀಲ್ಡ್ ಟರ್ಫ್ ಕೋರ್ಟ್‌ನಲ್ಲಿ ಮೊನ್ನೆ ರಾತ್ರಿ ಆಟ ನಡೆಯುತ್ತಿತ್ತು. ಆಗ ಯಾರೋ ಅದರ ವಿದ್ಯುತ್ ಸಂಪರ್ಕವನ್ನು ಆಫ್ ಮಾಡಿದ್ದರು. ಅದನ್ನು ತಾನು ಪ್ರಶ್ನಿಸಿದಾಗ ಮೂವರು ಸೇರಿ ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಪ್ರಸ್ತುತ ಕ್ರೀಡಾಂಗಣದ ವಾಚ್‌ಮ್ಯಾನ್ ಪಟ್ಲದ ಇಲ್ಯಾಸ್ (೩೬) ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಆರೋಪಿಸಿದ್ದಾರೆ. ಆತನನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆತ ನೀಡಿದ ದೂರಿನಂತೆ ಹಾರಿಸ್, ರಾಫಿ ಸೇರಿದಂತೆ ಒಟ್ಟು ಮೂರು ಮಂದಿ ವಿರುದ್ಧ ಕಾಸರಗೋಡು ಪೊಲೀಸರು ನರಹತ್ಯಾಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
