ಆಟೋ ಚಾಲಕನ ಕೊಲೆ ಪ್ರಕರಣ: ಆರೋಪಿ ಕಸ್ಟಡಿಗೆ

ಮಂಜೇಶ್ವರ: ಕುಂಜತ್ತೂರು ಬಳಿಯ ಅಡ್ಕಪಳ್ಳ ಮಾನಿಗುಡ್ಡೆ ಎಂಬಲ್ಲಿ  ಮಂಗಳೂರು ಮುಲ್ಕಿ ಬಳಿಯ ಕೊಲ್ನಾ ಡು ನಿವಾಸಿಯೂ  ಆಟೋ ಚಾಲಕ ನಾದ ಮೊಹಮ್ಮದ್ ಶರೀಫ್ (52) ಎಂಬವರನ್ನು ಕೊಲೆಗೈದ ಪ್ರಕರಣದ ಹೆಚ್ಚಿನ ತನಿಖೆಯಂಗವಾಗಿ ಮಂಜೇಶ್ವರ  ಪೊಲೀಸರು ರಿಮಾಂಡ್ ನಲ್ಲಿದ್ದ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.  ಮಂಗಳೂರು ಸುರತ್ಕಲ್ ಬಳಿಯ ಕಲ್ಲಾಪು ಎಂಬಲ್ಲಿನ ಅಭಿಷೇಕ್ ಶೆಟ್ಟಿ (25)ಯನ್ನು ಐದು ದಿನಗಳಿಗೆ ಕಸ್ಟಡಿಗೆ ತೆಗೆದುಕೊಂಡಿರು ವುದಾಗಿ ಪೊಲೀಸರು ತಿಳಿಸಿದ್ದಾರೆ. ಕೊಲೆ ನಡೆದ ಸ್ಥಳಕ್ಕೆ ಆರೋಪಿಯನ್ನು ಕರೆದೊಯ್ದು    ಮಾಹಿತಿ ಸಂಗ್ರಹಿಸ ಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ಈ ತಿಂಗಳ 10ರಂದು ರಾತ್ರಿ 7 ಗಂಟೆ ವೇಳೆ ಮೊಹಮ್ಮದ್ ಶರೀಫ್‌ರ ಮೃತದೇಹ ಮಾನಿಗುಡ್ಡೆಯ ಬಾವಿಯಲ್ಲಿ ಪತ್ತೆಯಾಗಿತ್ತು.

You cannot copy contents of this page