ಆಟೋ ರಿಕ್ಷಾ ಮಗುಚಿ ಚಾಲಕ ಮೃತ್ಯು
ಕಾಸರಗೋಡು: ಆಟೋ ರಿಕ್ಷಾ ಅಪಘಾತಕ್ಕೀಡಾಗಿ ಚಾಲಕ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ರಾಜಪುರ ಚಕ್ಕಾಲಕಲ್‌ನ ಬೇಬಿ-ಫಿಲೋಮಿನಾ ದಂಪತಿಯ ಪುತ್ರ ಅಭಿಲಾಷ್ ಬೇಬಿ (೪೦) ಸಾವನ್ನಪ್ಪಿದ ದುರ್ದೈವಿ. ಅಭಿಲಾಷ್ ಬೇಬಿ ರಾಜಪುರದ ಪೂಡಂಗಲ್‌ಗೆ ಆಟೋ ರಿಕ್ಷಾ ಚಲಾಯಿಸಿಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ಪೈನಿಕರದಲ್ಲಿ ರಸ್ತೆ ಬದಿ ಇದ್ದ ಮಣ್ಣಿನ ರಾಶಿಗೆ ಆಟೋ ರಿಕ್ಷಾ ಢಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಗಂಭೀರ ಗಾಯಗೊಂಡ ಅಭಿಲಾಷ್‌ರನ್ನು ತಕ್ಷಣ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
ಮೃತರು ಪತ್ನಿ ಮೋನ್‌ಸ್ಸಿ (ಇಸ್ರೆಲ್), ಮಕ್ಕಳಾದ ಒಲಿವಿಯಾ ಅಭಿಲಾಷ್, ಸಹೋದರ ಲೋಬಿಷ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.