ಆದೂರು ಶ್ರೀ ಭಗವತೀ ಕ್ಷೇತ್ರ ಪೆರುಂಕಳಿಯಾಟ ಮಹೋತ್ಸವ : ಭಕ್ತಿಪೂರ್ವಕ ಭತ್ತ ಅಳೆಯುವ ಕಾರ್ಯಕ್ರಮ ಸಂಪನ್ನ
ಮುಳ್ಳೇರಿಯ: ಆದೂರು ಶ್ರೀ ಭಗವತೀ ಕ್ಷೇತ್ರದ ಪೆರುಂಕಳಿಯಾಟ ಮಹೋತವದ ಅಂಗವಾಗಿ ಭತ್ತ ಅಳೆಯುವ ಕಾರ್ಯಕ್ರಮ ಶ್ರೀ ಭಗವತೀ ಕ್ಷೇತ್ರದಲ್ಲಿ ಜರಗಿತು. ಕ್ಷೇತ್ರ ಸ್ಥಾನಿಕರು ಪ್ರಧಾನ ನೇತೃತ್ವ ವಹಿಸಿದರು. ಆಚರಣೆ ಸಮಿತಿಯ ನೇತೃತ್ವದಲ್ಲಿ ಸಾವಯವ ರೀತಿಯಲ್ಲಿ ಭತ್ತ ಕೃಷಿ ಕೈಗೊಂಡು ಅದರಿಂದ ಲಭಿಸಿದ ಭತ್ತವನ್ನು ಉಪಯೋಗಿಸಿ ಭತ್ತ ಅಳೆಯುವ ಕಾರ್ಯಕ್ರಮವನ್ನು ನಡೆಸಲಾಗಿದೆ.
ಈ ತಿಂಗಳ 12ರಂದು ಕ್ಷೇತ್ರ ಸನ್ನಿಧಿಯಲ್ಲಿ ಗೊನೆ ಮುಹೂರ್ತ ನಡೆಯಲಿದೆ. ಮೂರೂವರೆ ದಶಕದ ಬಳಿಕ ಈ ತಿಂಗಳ 19ರಿಂದ 24ರವರೆಗೆ ಪೆರುಂಕಳಿಯಾಟ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಇದಕ್ಕಿರುವ ಸಿದ್ಧತೆ ಈಗಾಗಲೇ ನಡೆಸಲಾಗಿದ್ದು, ವಿವಿಧ ಕಾರ್ಯಕ್ರಮಗಳು ನಡೆಯುತ್ತಿದೆ.