ಆನ್‌ಲೈನ್ ಉದ್ಯೋಗ ಆಮಿಷ: ಇಬ್ಬರು ಮಹಿಳೆಯರ ೪ ಲಕ್ಷದ ೭೦ ಸಾವಿರ ರೂ. ನಷ್ಟ; ಕೇಸು ದಾಖಲು

ಕುಂಬಳೆ: ಆನ್‌ಲೈನ್ ಉದ್ಯೋಗದ ಆಮಿಷವೊಡ್ಡಿ ಹಣ ಲಪಟಾಯಿಸುವ ಮಂದಿಗೆ ಜಿಲ್ಲೆಯ ಇಬ್ಬರು ಮತ್ತೆ ತುತ್ತಾಗಿದ್ದಾರೆ. ಕುಂಬಳೆ ಬಳಿಯ ಕೊಡ್ಯಮ್ಮೆ ನಿವಾಸಿ ರುಕ್ಸಾನ (೩೦), ಖದೀಜತ್ ತಸ್ಮಿಯ (೨೬) ವಂಚನೆಗೆ ಬಲಿಯಾದವರು. ಅಹಮ್ಮದ್ ಸೂಫಿಯಾನ್‌ರ ಪತ್ನಿಯಾದ ರುಕ್ಸಾನರ ೧.೩೯ಸಾವಿರ ರೂ. ಮೊಯ್ದೀನ್ ಸಾಹದ್‌ರ ಪತ್ನಿ ಖದೀಜತ್ ತಸ್ಮಿಯರ ೩.೩೧ಸಾವಿರ ರೂ. ನಷ್ಟಗೊಂಡಿದೆ.ಆನ್‌ಲೈನ್ ಉದ್ಯೋಗಕ್ಕಾಗಿ ವಾಟ್ಸಪ್ ಮೂಲಕ ಕರೆ ಮಾಡಿ ಮೊದಲು ೫೦೦ ರೂ.ವನ್ನು ವಂಚಕರ ಖಾತೆಗೆ ಕಳುಹಿಸಿದ್ದರು. ಬಳಿಕ ಸಾವಿರ, ೧೦ ಸಾವಿರ ರೂ.ವರೆಗೆ ರುಕ್ಸಾನ ಕಳುಹಿಸಿದ್ದರು.

ಇದಕ್ಕೆ ಪ್ರತಿಯಾಗಿ ಇಮ್ಮಡಿ ಹಣ ಮತ್ತೆ ಖಾತೆಗೆ ತಲುಪಿತ್ತು. ಆದರೆ ಕೊನೆಗೆ ೧.೩೯ ಸಾವಿರ ರೂ.ವನ್ನು ವಂಚಕರ ಖಾತೆಗೆ ಕಳುಹಿಸಿದ್ದು, ಅದರ ಬಳಿಕ ವಂಚನೆ ಬೆಳಕಿಗೆ ಬಂದಿದೆ. ಇದೇ ರೀತಿ ಖದೀಜತ್‌ರ ೩.೩೧ಸಾವಿರ ರೂ. ಕೂಡಾ ನಷ್ಟವಾಗಿದೆ. ಈ ಬಗ್ಗೆ ಸೈಬರ್ ಸೆಲ್‌ಗೆ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

You cannot copy contents of this page