ಆಯುಷ್ಮಾನ್ ಭಾರತ್ ವಿಮೆ ಕೇರಳದಲ್ಲಿ 588 ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಕರ್ಯ
ಕಾಸರಗೋಡು: ಕೇಂದ್ರ ಸರಕಾರ ಹೊಸದಾಗಿ ಜ್ಯಾರಿಗೊಳಿಸಿರುವ 70ಕ್ಕಿಂತ ಮೇಲ್ಪಟ್ಟ ವಯೋಮಿತಿಯವರಿಗಾಗಿ ಆಯುಷ್ಮಾನ್ ಭಾರತ್ ಇನ್ಶೂರೆನ್ಸ್ ವಿಮೆ ಯೋಜನೆ ಪ್ರಕಾರ ಕೇರಳದ ೫೮೮ ಆಸ್ಪತ್ರೆಗಳಲ್ಲೂ ಚಿಕಿತ್ಸಾ ಸೌಕರ್ಯ ಲಭಿಸಲಿದೆ.
ಇದರಂತೆ 70ಕ್ಕಿಂತ ಮೇಲ್ಪಟ್ಟ ಎಲ್ಲರೂ ಈ ಯೋಜನೆಗೆ ಪ್ರತ್ಯೇಕವಾಗಿ ಹೆಸರು ನೋಂದಾವಣೆ ನಡೆಸಬೇಕಾಗಿದೆ. ಆಯುಷ್ಮಾನ್ ಭಾರತ್ ಇನ್ಶೂರೆನ್ಸ್ ಯೋಜನೆಗೆ ಸಂಬಂಧಿಸಿದ ದೂರುಗಳು ಅಥವಾ ಸಂಶಯಗಳಿದ್ದಲ್ಲಿ ಅದನ್ನು 14555 ಎಂಬ ಫೋನ್ ನಂಬ್ರಕ್ಕೆ ಕರೆಮಾಡಿ ತಿಳಿದುಕೊಳ್ಳಬಹುದಾಗಿದೆ.
ಈ ಯೋಜನೆ ಪ್ರಕಾರ ಎಂ. ಪ್ಯಾನಲ್ ಗೈದ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಆಗಮಿಸುವವರು ಆಯುಷ್ಮಾನ್ ಕಾರ್ಡ್ ಹಾಜರುಪಡಿಸಬೇಕು. ರೋಗಗಳಿಗೆ ಹೊಂದಿಕೊಂಡು ಅದಕ್ಕೆ ಸಂಬಂಧಪಟ್ಟ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯಬೇಕು. ರಾಜ್ಯದಲ್ಲಿ ಯಾವುದೆಲ್ಲಾ ಆಸ್ಪತ್ರೆಗಳಲ್ಲಿ ಈ ಯೋಜನೆ ಪ್ರಕಾರ ಚಿಕಿತ್ಸೆ ಲಭಿಸಲಿದೆ ಎಂಬುದು www.dashboard.pmjay.gov.in ಎಂಬ ವೆಬ್‌ಸೈಟ್‌ನಲ್ಲಿ ಪರಿಶೀಲನೆಗೆ ಲಭಿಸಲಿದೆ. ದೇಶದಲ್ಲಿ ಒಟ್ಟಾರೆಯಾಗಿ ಈ ಯೋಜನೆ ಪ್ರಕಾರ 30,000 ದಷ್ಟು ಆಸ್ಪತ್ರೆಗಳಲ್ಲಿ ಪ್ರಸ್ತುತ ಯೋಜನೆ ಪ್ರಕಾರ ಚಿಕಿತ್ಸೆ ಲಭಿಸಲಿದೆ. ಇದರಲ್ಲಿ ಕೇರಳದ ೫೮೮ ಆಸ್ಪತ್ರೆಗಳೂ ಒಳಗೊಂಡಿವೆ.
ಆಯುಷ್ಮಾನ್ ಭಾರತ್ ಯೋಜನೆ ಪ್ರಕಾರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಲ್ಲಿ ಐದು ಲಕ್ಷ ರೂ. ತನಕ ಚಿಕಿತ್ಸೆ ಪೂರ್ಣ ಉಚಿತವಾಗ ಕೇಂದ್ರ ಸರಕಾರದಿಂದ ಲಭಿಸಲಿದೆ. ಪ್ರಸ್ತುತ ಯೋಜನೆಯಲ್ಲಿ ಒಳಪಟ್ಟಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡದೇ ಇದ್ದಲ್ಲಿ ಅದನ್ನೂ 14555 ನಂಬ್ರಕ್ಕೆ ಕರೆದು ತಿಳಿಸಿದಲ್ಲಿ ಅದಾದ ಆರು ಗಂಟೆಯೊಳಗಾಗಿ ಅದಕ್ಕೆ ಪರಿಹಾರ ಲಭಿಸಲಿದೆ. ರಾಷ್ಟ್ರೀಯ ಆರೋಗ್ಯ ಅಥೋರಿಟಿ (ಪ್ರಾಧಿಕಾರ)ದ www.beneficiary.nha.gov.in ಎಂಬ ವೆಬ್ ಸೈಟ್ ಮೂಲಕ ಈ ಯೋಜನೆಗೆ ಹೆಸರು ನೋಂದಾಯಿಸಬೇಕು. ಯಾವುದಕ್ಕೂ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ಜೋಡಣೆ ಹೊಂದಿರುವ ಮೊಬೈಲ್ ಫೋನ್‌ನ್ನು ಮಾತ್ರವೇ ಈ ಸೇವೆಗೆ ಬಳಸಬಹುದು.