ಆರಿಕ್ಕಾಡಿ ಕೋಟೆಯಲ್ಲಿ ನಿಧಿ ಶೋಧ: ಮೊಗ್ರಾಲ್ ಪುತ್ತೂರು ಪಂ. ಉಪಾಧ್ಯಕ್ಷನ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಮಾರ್ಚ್
ಮೊಗ್ರಾಲ್ ಪುತ್ತೂರು: ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮುಜೀಬ್ ಕಂಬಾರು ನೇತೃತ್ವದಲ್ಲಿ ತಂಡವೊಂದು ಕುಂಬಳೆ ಆರಿಕ್ಕಾಡಿ ಕೋಟೆಗೆ ಅತಿಕ್ರಮಿಸಿ ನುಗ್ಗಿ ನಿಧಿ ಶೋಧ ನಡೆಸಿರುವುದನ್ನು ಪ್ರತಿಭಟಿಸಿ ಬಿಜೆಪಿ ಮೊಗ್ರಾಲ್ ಪುತ್ತೂರು ಪಂಚಾಂiiತ್ ಸಮಿತಿ ಪಂಚಾಯತ್ ಕಚೇರಿಗೆ ಮಾರ್ಚ್ ನಡೆಸಿತು. ನಿಧಿ ಶೋಧಕ್ಕೆ ನೇತೃತ್ವ ನೀಡಿದ ಪಂಚಾಯತ್ ಉಪಾಧ್ಯಕ್ಷ ಕೂಡಲೇ ರಾಜೀನಾಮೆ ನೀಡಬೇಕೆಂ ದು ಒತ್ತಾಯಿಸಿ ಮಾರ್ಚ್ ನಡೆಸಲಾ ಯಿತು. ಚೌಕಿ ಜಂಕ್ಷನ್‌ನಿಂದ ಆರಂs ಗೊಂಡ ಮಾರ್ಚ್‌ನಲ್ಲಿ ನೂರಾರು ಮಂದಿ ಕಾರ್ಯಕರ್ತರು ಭಾಗವಹಿಸಿ ದರು. ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಗುರುಪ್ರಸಾದ್ ಪ್ರಭು ಉದ್ಘಾಟಿ ಸಿದರು. ಬಿಜೆಪಿ ಮೊಗ್ರಾಲ್ ಪುತ್ತೂರು ಪಂಚಾಯತ್ ಅಧ್ಯಕ್ಷ ಚಂದ್ರಶೇಖರ, ಯುವಮೋರ್ಛಾ ಮಾಜಿ ಜಿಲ್ಲಾಧ್ಯಕ್ಷ ಧನಂಜಯ, ಮಧೂರು ಮಂಡಲ ಪ್ರಧಾನ ಕಾರ್ಯದರ್ಶಿ ಸುಕುಮಾರ ಕುದ್ರೆಪ್ಪಾಡಿ, ಜಿಲ್ಲಾ ಸಮಿತಿ ಸದಸ್ಯ ಉಮೇಶ್ ಕಡಪ್ಪುರ, ಮಹಿಳಾ ಮೋರ್ಛಾ ಮಂಡಲ ಅಧ್ಯಕ್ಷೆ ಪ್ರಿಯಾ, ಮೊಗ್ರಾಲ್ ಪುತ್ತೂರು ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಪ್ರಮೀಳ ಮಜಲ್, ಜನಪ್ರತಿನಿಧಿಗಳಾದ ಸಂಪತ್ತ್ ಕುಮರ್, ಮಲ್ಲಿಕ, ಸುಲೋಚನ, ಗಿರೀಶ್ ಮೊದಲಾದವರು ಮಾತನಾಡಿದರು.