ಆರಿಕ್ಕಾಡಿ ಕೋಟೆಯೊಳಗೆ ಬೆಂಕಿ ಆಕಸ್ಮಿಕ
ಕುಂಬಳೆ: ತಂಡವೊಂದು ನಿಧಿ ಶೋಧ ನಡೆಸಿದ ಆರಿಕ್ಕಾಡಿ ಕೋಟೆಯಲ್ಲಿ ನಿನ್ನೆ ಸಂಜೆ ಬೆಂಕಿ ಹತ್ತಿಕೊಂಡ ಘಟನೆ ನಡೆದಿದೆ. ವಿಷಯ ತಿಳಿದು ತಲುಪಿದ ಪೊಲೀ ಸ್, ಅಗ್ನಿಶಾಮಕದಳ, ನಾಗರಿಕರ ಸಹಾಯದಿಂದ ಬೆಂಕಿ ನಂದಿಸಿದೆ. ಬೆಂಕಿ ಹೇಗೆ ಹತ್ತಿಕೊಂಡಿದೆಯೆಂದು ತಿಳಿದು ಬಂದಿಲ್ಲ.
ಈ ಮೊದಲು ಕೋಟೆಯೊಳಗೆ ಕಾಡು ತುಂಬಿಕೊಂ ಡಿದ್ದುದರಿಂದ ಅದರೊಳಗೆ ನಡೆಯುತ್ತಿದ್ದ ಯಾವುದೇ ಚಟುವಟಿಕೆ ಹೊರಗೆ ತಿಳಿ ಯುತ್ತಿರಲಿಲ್ಲ. ಇದೀಗ ಕಾಡು ಬೆಂಕಿಗಾಹುತಿಯಾದುದರಿಂದ ಕೋಟೆಯೊಳಗೆ ಇನ್ನು ಮುಂದೆ ನಡೆಯುವ ಚಟುವಟಿಕೆ ಕೂಡಲೇ ತಿಳಿದು ಬರಲಿದೆಯೆಂದು ನಾಗರಿ ಕರು ತಿಳಿಸುತ್ತಿದ್ದಾರೆ.