ಆರಿಕ್ಕಾಡಿ ಪಾರೆ ಶ್ರೀ ಭಗವತಿ ಆಲಿಚಾಮುಂಡಿ ಕ್ಷೇತ್ರ ಕಳಿಯಾಟದಲ್ಲಿ ದೈವಕೋಲವಿಲ್ಲ: ಕಾರ್ಯಕ್ರಮಗಳು ಸುಸೂತ್ರ

ಕುಂಬಳೆ: ಆರಿಕ್ಕಾಡಿ ಪಾರೆ ಶ್ರೀ ಭಗವತಿ ಆಲಿ ಚಾಮುಂಡಿ ಕ್ಷೇತ್ರದ ಈ ವರ್ಷದ ಕಳಿಯಾಟ ಮಹೋತ್ಸವದಲ್ಲಿ ದೈವಕೋಲಗಳು ಇರುವುದಿಲ್ಲವೆಂದು, ಆದರೆ ಸಂಪ್ರದಾಯ ರೀತಿಯ ಕಾರ್ಯಕ್ರಮಗಳು ನಡೆಯುತ್ತದೆ ಎಂದು ಪದಾಧಿಕಾರಿಗಳಾದ ಪಾರಂಪರ್ಯ ಖಾಯಂಟ್ರಸ್ಟಿ ಸಿ.ವಿ. ಮೋಹನ್‌ದಾಸ್ ರೈ, ದೈವ ಕಲಾವಿದರಾದ ಕುಂಬ್ಯ ತರವಾಡಿನ  ರಾಜೇಶ್ ರಾಮಚಂದ್ರನ್, ಇಚ್ಲಂಪಾಡಿ ತರವಾಡಿನ ಶ್ರೀಧರ ಪಣಿಕರ್, ಬಲ್ಲಂಪಾಡಿ ತರವಾಡಿನ ಮೋಹನನ್, ಕೋರಿಕಂಡ   ತರವಾಡಿನ ನಾಗೇಶ್, ನ್ಯಾಯವಾದಿ ಭಾಗ್ಯಶ್ರೀ ರೈ ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ದೈವಕೋಲಗಳು ಇಲ್ಲದಿದ್ದರೂ ಉಳಿದ ಕಾರ್ಯಕ್ರಮಗಳು ಪ್ರತಿವರ್ಷದಂತೆ ನಡೆಯಲಿದೆ ಎಂದವರು ತಿಳಿಸಿದ್ದಾರೆ.

RELATED NEWS

You cannot copy contents of this page