ಆಲಂಕೂಡ್ಲು ಕ್ಷೇತ್ರದಲ್ಲಿ ಶ್ರೀ ಶಿವಶಕ್ತಿ ಮಹಾಯಾಗ ಸಮಾಪ್ತಿ
ಪುಂಡೂರು: ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಿನ್ನೆ ಶಿವಶಕ್ತಿ ಮಹಾಯಾಗ ಸಮಾಪ್ತಿಗೊಂಡಿತು. ಕುಂಟಾರು ರವೀಶ ತಂತ್ರಿ ಉಪಸ್ಥಿತಿಯಲ್ಲಿ ವೇದಮೂರ್ತಿ ಕಶೆಕೋಡಿ ಸೂರ್ಯನಾರಾಯಣ ಭಟ್‌ರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ಜರಗಿತು. ಗಣಪತಿ ಹೋಮ, ಹೋಮ ಪೂರ್ಣಾಹುತಿ ಜರಗಿದ್ದು, ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತೀ ಸ್ವಾಮೀಜಿ ಉಪಸ್ಥಿತರಿದ್ದರು. ಆನುವಂಶಿಕ ಮೊಕ್ತೇಸರ ಪಿ.ಎಸ್. ಪುಣಿಂಚಿತ್ತಾಯ, ಯಾಗ ಸಮಿತಿ ಅಧ್ಯಕ್ಷ ಮಧುಸೂದನ ಆಯರ್, ಉದ್ಯಮಿ ಶಿವಶಂಕರ ನೆಕ್ರಾಜೆ ಭಾಗವಹಿಸಿದರು.