ಆಶಾ ಕಾರ್ಯಕರ್ತೆಯರಿಗೆ ಬೆಂಬಲ ಸೂಚಿಸಿ ಪೈವಳಿಕೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ
ಪೈವಳಿಕೆ: ಮಾಸಿಕ ಗೌರವಧನ ಏರಿಕೆ ಸಹಿತ ವಿವಿಧ ಬೇಡಿಕೆ ಮುಂದಿರಿಸಿಕೊಂಡು ಮುಷ್ಕರ ನಿರತರಾಗಿರುವ ಆಶಾಕಾರ್ಯಕರ್ತೆ ಯರು ಮುಷ್ಕರ ನಿಲ್ಲಿಸಿ ಕೂಡಲೇ ಸೇವೆಗೆ ಹಾಜರಾಗಬೇಕೆಂಬ ರಾಜ್ಯ ಸರಕಾರದ ಆದೇಶದ ವಿರುದ್ಧ ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಪೈವಳಿಕೆ ಪಂಚಾಯತ್ ಕಚೇರಿ ಮುಂಭಾಗ ಆದೇಶದ ಪ್ರತಿ ಉರಿಸಿ ಪ್ರತಿಭಟನೆ ನಡೆಸಲಾಯಿತು. ಮಂಡಲ ಅಧ್ಯಕ್ಷ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದರು. ಬ್ಲೋಕ್ ಕಾಂಗ್ರೆಸ್ ಕಾರ್ಯದರ್ಶಿ ರಾಘವೇಂದ್ರ ಭಟ್ ಉದ್ಘಾಟಿಸಿದರು. ಅಸೀಸ್ ಕಳಾಯಿ ಶುಭ ಹಾರೈಸಿದರು. ಶಾಜಿ ಎನ್.ಸಿ. ಸ್ವಾಗತಿಸಿ, ಚನಿಯಪ್ಪ ವಂದಿಸಿದರು. ನೌಶಾದ್ ಕಯ್ಯಾರು, ಗಂಗಾಧರ ನಾಯ್ಕ್, ಅಬ್ದುಲ್ಲ ಹಾಜಿ ನೇತೃತ್ವ ನೀಡಿದರು.