ಆಶಾ ವರ್ಕರ್‌ಗಳ ಮುಷ್ಕರಕ್ಕೆ ಬೆಂಬಲ: ಪೈವಳಿಕೆಯಲ್ಲಿ ಕಾಂಗ್ರೆಸ್‌ನಿಂದ ಪಂಜಿನ ಮೆರವಣಿಗೆ

ಪೈವಳಿಕೆ: ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಕಳೆದ 14 ದಿನಗಳಿಂದ ತಿರುವನಂತಪುರದಲ್ಲಿ ಸೆಕ್ರೆಟರಿಯೇಟ್ ಮುಂಭಾಗ ಮುಷ್ಕರ ನಡೆಸುತ್ತಿರುವ ಆಶಾ ವರ್ಕರ್‌ಗಳ ಬೇಡಿಕೆ ಬಗ್ಗೆ ಮೌನ ವಹಿಸಿರುವ ಪಿಣರಾಯಿ ಸರಕಾರದ ವಿರುದ್ಧ ಹಾಗೂ ಆಶಾವರ್ಕರ್‌ಗಳ ಮುಷ್ಕರಕ್ಕೆ ಬೆಂಬಲ ಸೂಚಕವಾಗಿ ಕೆಪಿಸಿಸಿ ನಿರ್ದೇಶದಂತೆ ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ನಡೆಯಿತು. ಮಂಡಲ ಅಧ್ಯಕ್ಷ ವಸಂತ ಕುಮಾರ್ ನೇತೃತ್ವ ವಹಿಸಿದರು. ರಾಘವೇಂದ್ರ ಭಟ್, ನಾರಾಯಣ ಏದಾರ್, ಶಾಜಿ ಎನ್.ಸಿ, ನೌಶಾದ್ ಕಯ್ಯಾರ್, ಶಿವರಾಮ ಶೆಟ್ಟಿ, ಮುಸ್ತಫ, ಎಡ್ವರ್ಡ್, ಜೋಯ್, ರಾಮ ಏದಾರ್ ಭಾಗವಹಿಸಿದರು.

You cannot copy contents of this page