‘ಆಸ್ಪತ್ರೆಗೆ ನುಗ್ಗಿ ವೈದ್ಯರಿಗೆ ಹಲ್ಲೆಗೈದ ಆರೋಪಿ ಬಂಧನ
ಹೊಸದುರ್ಗ: ಖಾಸಗಿ ಆಸ್ಪತ್ರೆಗೆ ನುಗ್ಗಿ ವೈದ್ಯರ ಮೇಲೆ ಹಲ್ಲೆ ನಡೆಸಿ ಉಪಕರಣಗಳನ್ನು ಹಾನಿಗೊಳಿಸಿದ ಪ್ರಕರಣದ ಆರೋಪಿ ಸೆರೆಗೀಡಾಗಿ ದ್ದಾನೆ. ಮಾವುಂಗಾಲ್ ನಿವಾಸಿ ಮಣಿಕಂಠನ್ (42) ಎಂಬಾತನ್ನು ಹೊಸದುರ್ಗ ಪೊಲೀಸ್ ಇನ್ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ಸೆರೆಹಿಡಿದಿದ್ದಾರೆ. ಆರೋಪಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಕೆಲವು ದಿನಗಳ ಹಿಂದೆ ಹೊಸದುರ್ಗ ಕ್ಷೇತ್ರವೊಂದರ ಕಚೇರಿಗೆ ಅತಿಕ್ರಮಿಸಿ ನುಗ್ಗಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮಣಿಕಂಠನ್ ಆರೋಪಿಯಾಗಿದ್ದನು. ಪ್ರಸ್ತುತ ಪ್ರಕರಣದಲ್ಲಿ ಸೆರೆಗೀಡಾದ ಈತ ಜಾಮೀನಿನಲ್ಲಿ ಬಿಡುಗಡೆಗೊಂಡಿ ದ್ದನು. ಅದರ ಬೆನ್ನಲ್ಲೇ ಆಸ್ಪತ್ರೆಗೆ ನುಗ್ಗಿ ಹಲ್ಲೆ, ದಾಂಧಲೆ ನಡೆಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.