ಕಾಸರಗೋಡು: ನಗರದ ಬ್ಯಾಂಕ್ ರಸ್ತೆ ಬಳಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೊಂದರ ಎಂ.ಆರ್.ಐ ಸ್ಕ್ಯಾನಿಂಗ್ ಟೆಕ್ನಿಕಲ್ ಸಿಬ್ಬಂದಿ ಉಳಿಯತ್ತಡ್ಕ ಎಸ್‌ಪಿ ನಗರದ ಅಬ್ದುಲ್ ರಜಾಕ್ (38) ಎಂಬವರನ್ನು ಪ್ರಸ್ತುತ ಆಸ್ಪತ್ರೆಯ ಪಾರ್ಕಿಂಗ್ ಏರಿಯಾದಲ್ಲೇ ಇರಿದು ಗಂಭೀರವಾಗಿ ಗಾಯಗೊಳಿಸಿದ ಪ್ರಕರಣದ ಆರೋಪಿಯನ್ನು ಪೊಲೀಸರು ಇಂದು ಬೆಳಿಗ್ಗೆ ಕಾಸರಗೋಡು ಪೊಲೀಸ್ ಠಾಣೆಗೆ ತಲುಪಿಸಿದ್ದಾರೆ.
ಉದುಮ ತೆಕ್ಕೇಕರ ತಾಮರಕುಳ ಹೌಸ್‌ನ ಮೊಹಮ್ಮದ್ ಜೌಹರ್ ರಿಸ್ವಾನ್ (23) ಈ ಪ್ರಕರಣದ ಆರೋಪಿಯಾಗಿದ್ದು ಈತನನ್ನು ಮೊನ್ನೆ ಬೆಂಗಳೂರು ವಿಮಾನ ನಿಲ್ದಾಣದಿಂದ ಪೊಲೀಸರು ಬಂಧಿಸಿದ್ದರು. ನಂತರ ಆತನ್ನು ಇಂದು ಬೆಳಿಗ್ಗೆ ಕಾಸರಗೋಡು ಪೊಲೀಸ್ ಠಾಣೆಗೆ ತಂದಿದ್ದು, ಪೊಲೀಸರು ಆತನನ್ನು ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ. ಇರಿತಕ್ಕಿರುವ ಕಾರಣದ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.