ಆಸ್ಪತ್ರೆ ನೌಕರೆಗೆ ಕಿರುಕುಳ: ರೋಗಿಯ ಸಹಾಯಿ ಸೆರೆ

ಕಾಸರಗೋಡು: ಆಸ್ಪತ್ರೆ ನೌಕರೆ ಯಾದ ಯುವತಿಯನ್ನು ಕೈಹಿಡಿದೆಳೆದು ಕಿರುಕುಳ ನೀಡಿರುವುದಾಗಿ ದೂರಲಾ ಗಿದೆ. ಯುವಕನ ವಿರುದ್ಧ ಚಂದೇರ ಪೊಲೀಸರು ಕೇಸು ದಾಖಲಿಸಿದ್ದಾರೆ. ಚೆರ್ವತ್ತೂರು ಪಯ್ಯಂಗಿ ನಿವಾಸಿ ನೌಫಲ್ (30)ನನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಘಟನೆ ನಡೆದಿದೆ. ರೋಗಿಯ ಜೊತೆಯಲ್ಲಿ ಸಹಾಯಕ್ಕಾಗಿ ನೌಫಲ್ ತಲುಪಿದ್ದನು.  ಕೊಠಡಿಯನ್ನು ಶುಚೀಕರಿಸಲು ತಲುಪಿದ ಯುವತಿಯನ್ನು ಈತ ಕೈ ಹಿಡಿದೆಳೆದಿರುವುದಾಗಿ ದೂರು ದಾಖ ಲಾಗಿದೆ. ಯುವತಿ ಬೊಬ್ಬೆ ಹೊಡೆ ದಾಗ ಇತರ ನೌಕರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ತಲುಪಿ ಯುವತಿಯಿಂದ ಹೇಳಿಕೆ ದಾಖಲಿಸಿದ ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ.

You cannot copy contents of this page