ಆಹಾರ ಮಾರಾಟಗೈಯ್ಯುವ ಯುವಕನಿಗೆ ತಂಡದಿಂದ ಹಲ್ಲೆ

ಕುಂಬಳೆ: ಶವರ್ಮ ಆರ್ಡರ್ ತೆಗೆದು ಗ್ರಾಹಕರಿಗೆ ತಲುಪಿಸು ತ್ತಿದ್ದ ಯುವಕನಿಗೆ ತಂಡವೊಂದು ಹಲ್ಲೆ ಗೈದ ಬಗ್ಗೆ ದೂರ ಲಾಗಿದೆ.  ಶಿರಿಯ ಬತ್ತೇರಿಯ  ಶಮ್ಮೋ ನುಲ್ ಗಾಸ (18) ಎಂಬವರಿಗೆ  ನಿನ್ನೆ ಅಡ್ಕ ವಳಾಕ್ ರೋಡ್‌ನಲ್ಲಿ 15 ಮಂ ದಿಯ ತಂಡ ತಡೆದು ನಿಲ್ಲಿಸಿ ಕಬ್ಬಿಣದ ಸರಳಿಯಿಂದ ಹಲ್ಲೆಗೈದಿರುವುದಾಗಿ ದೂರಲಾಗಿದೆ.  ಗಾಯಾಳುವನ್ನು ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ಅಡ್ಕ ವಳಾಕ್ ರೋಡ್‌ನಲ್ಲಿರುವ ಶವರ್ಮ ಮಾರಾಟ ಕೇಂದ್ರದಿಂದ ಆಹಾರ ತರಲು ತೆರಳುತ್ತಿದ್ದ ವೇಳೆ ತಂಡ  ಪ್ರಶ್ನಿಸಿ ಹಲ್ಲೆಗೈದಿರುವುದಾಗಿ ದೂರಲಾಗಿದೆ.

RELATED NEWS

You cannot copy contents of this page