ಇಂಜಿನ್ ಕೈಕೊಟ್ಟು ಸಮುದ್ರದಲ್ಲಿ ಸಿಲುಕಿದ ದೋಣಿಯಲ್ಲಿದ್ದ 19 ಬೆಸ್ತರ ರಕ್ಷಣೆ

ಕಾಸರಗೋಡು: ನಾಡದೋ ಣಿಯಲ್ಲಿ ಮೀನುಗಾರಿಕೆಗೆಂದು ಸಮುದ್ರಕ್ಕಿ ಳಿದ ವೇಳ ಅದರ ಇಂಜಿನ್ ಕೈಕೊಟ್ಟ ಕಾರಣ ಆ ದೋಣಿಯಲ್ಲಿ ಸಿಲುಕಿದ 19 ಮಂದಿ ಬೆಸ್ತರನ್ನು ಕಾಸರಗೋಡು ಮರೈನ್ ಎನ್‌ಫೋರ್ಸ್ ಮೆಂಟ್ ತಂಡ ರಕ್ಷಿಸಿದ ಘಟನೆ ನಡೆದಿದೆ. ಚೆರ್ವತ್ತೂರು ಅಳಿವೆ ಬಾಗಿಲಿ ನಿಂದ ನಿನ್ನೆ ಬೆಳಿಗ್ಗೆ ದೋಣಿಯಲ್ಲಿ 19 ಮಂದಿ ಬೆಸ್ತರು ಮೀನುಗಾರಿಕೆಗೆಂದು ಸಮುದ್ರಕ್ಕಿಳಿದಿದ್ದರು. ಆ ದೋಣಿ ಮಧ್ಯಾಹ್ನ 12.30ಕ್ಕೆ ವೇಳೆ ಮಾಹಿಯಿಂದ 10 ಕಿಲೋ ಮೀಟರ್  ದೂರಕ್ಕೆ ಸಾಗಿದಾಗ ದೋಣಿಯ ಯಂತ್ರ ಕೈಕೊಟ್ಟಿಟ್ಟು ಅದರೊಳಗಿದ್ದ ಬೆಸ್ತರು ಅಲ್ಲೇ ಸಿಲುಕಿಕೊಂಡರು. ಆ ವೇಳೆ ಮಳೆಯೂ ಸುರಿಯಲಾರಂಭಿಸಿತು. ಆ ಬಗ್ಗೆ ಕಾಸರಗೋಡು ಕಂಟ್ರೋಲ್ ರೂಂಗೆ   ಮಾಹಿತಿ ನೀಡಲಾಯಿತು. ತಕ್ಷಣ ಕಾಸರಗೋಡು ಮರೈನ್ ಎನ್‌ಫೋರ್ಸ್ ಮೆಂಟ್  ಇಲಾಖೆಯ ಅಸಿಸ್ಟೆಂಟ್ ಡೈರೆಕ್ಟರ್ ಪಿ.ವಿ. ಪ್ರೀತಾ ನೀಡಿದ ನಿರ್ದೇಶ ಪ್ರಕಾರ ಮರೈನ್ ರೆಸ್ಕ್ಯೂ ಯೂನಿಟ್ ತಕ್ಷಣ   ಬೋಟ್‌ನಲ್ಲಿ ಸಾಗಿ ಸಮುದ್ರದಲ್ಲಿ ಸಿಲುಕಿಕೊಂಡ  19 ಮಂದಿ ಬೆಸ್ತರನ್ನು ತಮ್ಮ ಬೋಟ್‌ಗೇರಿಸಿ ದಡಕ್ಕೆ ಸಾಗಿಸಿ ರಕ್ಷಿಸಿದರು.  ಮರೈನ್ ಎನ್‌ಫೋರ್ಸ್ ಮೆಂಟ್ ಎನ್.ಸಿ.ಪಿ ವಿನೋದ್ ಕುಮಾರ್, ಸಿಪಿಒ ಸುರೇಶ್, ರೆಸ್ಕ್ಯೂ  ಗಾರ್ಡ್‌ಗಳಾದ  ಮನು ಮತ್ತು ಶ್ರೀಕುಮಾರ್  ರಕ್ಷಾ ಕಾರ್ಯಾ ಚರಣೆಯಲ್ಲಿ ಒಳಗೊಂಡಿದ್ದರು.

You cannot copy contents of this page