ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪ್ರತಿನಿಧಿ ಸಂಗಮ

ಮಂಜೇಶ್ವರ: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮಂ ಜೇಶ್ವರ ಪಂಚಾಯತ್ ಸಮಿತಿಯಿಂದ ಪ್ರತಿನಿಧಿ ಸಂಗಮ-2025 ಮಂ ಜೇಶ್ವರ ಕಣ್ವತೀರ್ಥ ಕೆ.ಇ. ಅಬೂಬಕ್ಕರ್ ತಾಜಾ ನಗರ ಸಾರ ರೆಸಾರ್ಟ್ನಲ್ಲಿ ನಡೆಯಿತು.
ಬಿ.ಹೆಚ್. ಹಮೀದ್ ಮಚಂ ಪಾಡಿ ಧ್ವಜಾರೋಹಣ ನಡೆಸಿದರು. ಮಂಡಲ ಲೀಗ್ ಅಧ್ಯಕ್ಷ ಅಜಿಜ್ ಮರಿಕೆ ಉದ್ಘಾಟಿಸಿದರು. ಮಂಜೇಶ್ವರ ಲೀಗ್ ಕಮಿಟಿ ಕಾರ್ಯದರ್ಶಿ ಅಬ್ದುಲ್ಲ ಕಜೆ ಸ್ವಾಗತಿಸಿದರು. ಶಾಸಕÀ ಎ ಕೆ ಎಂ ಅಶ್ರಫ್, ಮಂಡಲ ಲೀಗ್ ಕಾರ್ಯದರ್ಶಿ ಆರಿಫ್, ಖಜಾಂಜಿ ಸೈಫುಲ್ಲ ತಂಙಳ್, ಹಮೀದ್ ಮಂಚ ಪ್ಪಾಡಿ ಶುಭ ಹಾರೈಸಿದರು.ಯೂತ್ ಲೀಗ್ ರಾಜ್ಯ ಕೋಶಾಧಿಕಾರಿ ಇಸ್ಮಾಯಿಲ್ ವಯನಾಡ್ ಇಂದಿನ ರಾಜಕೀಯ ಎಂಬ ವಿಷಯದಲ್ಲಿ ತರಗತಿ ನಡೆಸಿದರು. ಕಾರ್ಯಕ್ರಮದಲ್ಲಿ ಮಂಜೇಶ್ವರ ಪಂಚಾಯತ್‌ನ 21 ವಾರ್ಡಿನ ಮುಸ್ಲಿಂಲೀಗ್ ಕಮಿಟ್ಟಿಯ ಸದಸ್ಯರು, ಯೂತ್ ಲೀಗ್ ಸದಸ್ಯರು, ಎಂಎಸ್‌ಎಫ್ ಸದಸ್ಯರು, ವನಿತಾ ಲೀಗ್ ಸದಸ್ಯರು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಮುಸ್ಲಿಂ ಲೀಗ್‌ನ ಹಿರಿಯ 50 ಸದಸ್ಯರನ್ನು ಆದರಿಸಲಾ ಯಿತು. ಪಂಚಾಯತ್ ಲೀಗ್ ಅಧ್ಯಕ್ಷ ಅಜೀಜ್ ಹಾಜಿ, ಉಪಾಧ್ಯಕ್ಷ ರಾದ ಅಬ್ದುಲ್ ಖಾದರ್, ಮುಸ್ತಫಾ ಉದ್ಯಾವರ, ಸಹ ಕಾರ್ಯ ದರ್ಶಿಗಳಾದ ಶೇಯ್ಕ್ ಮೊಯಿದಿನ್ ಸಾಹೇಬ್, ಹನೀಫ್, ಸಿದ್ದಿಕ್ ಹಾಜಿ, ಮುಸ್ತಾರ್, ಪ್ರಿಯ ಮೋಹಿದಿನ್, ಮಹಿಳಾ ಲೀಗ್ ಪಂಚಾಯತ್ ಅಧ್ಯಕ್ಷೆ ಶಂಶೀನ, ಶೇಕಬ್ಬಾ, ಮುಂತಾದವರು ಶುಭ ಹಾರೈಸಿದರು. ಮಹಿಳಾ ಲೀಗ್ ಜಿಲ್ಲಾ ಅಧ್ಯಕ್ಷೆ ಮುಂತಾಜ್ ಸಮೀರಾ ವಂದಿಸಿದರು.

RELATED NEWS

You cannot copy contents of this page