ನವದೆಹಲಿ: ಇಂಡೋನೇಷ್ಯಾದ ಪಶ್ಚಿಮ ಅಕೆ ಪ್ರಾಂತ್ಯದಲ್ಲಿ ಇಂದು ಮುಂಜಾನೆ 2.48ರ ವೇಳೆಗೆ 5.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಹವಾಮಾನ ಏಜೆನ್ಸಿ ವರದಿ ಮಾಡಿದೆ. ಆರಂಭದಲ್ಲಿ ಭೂಕಂಪದ ತೀವ್ರತೆ 6.2ರಷ್ಟು ಇತ್ತು. ಸಿನಾಬಾಂಗಾ ನಗರದ ಆಗ್ನೇಯ 62 ಕಿ.ಮೀ. ದೂರದ ಸಮುದ್ರದ ತಳದ 30 ಕಿ.ಮೀ. ಆಳದಲ್ಲಿ ಭೂಕಂಪದ ಸೃಷ್ಟಿಕೇಂದ್ರವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.