ಇಕ್ಕಟ್ಟಾದ ರಸ್ತೆಯಲ್ಲಿ ಕೆಟ್ಟುನಿಂತ ಬಸ್ : ಸಂಚಾರ ಮೊಟಕಾಗಿ ಜನರಿಗೆ ಸಮಸ್ಯೆ

ಉಪ್ಪಳ: ರಸ್ತೆ ಮಧ್ಯೆ ಬಸ್ ಹಾನಿಯಾಗಿ ನಿಂತುಹೋದ ಕಾರಣದಿಂದ ಈ ದಾರಿಯಾಗಿ ಸಂಚಾರ ಮೊಟಕುಗೊಂಡು ಸ್ಥಳೀಯರು ಸಂಕಷ್ಟಕ್ಕೀಡಾದ ಸ್ಥಿತಿ ಉಂಟಾಗಿತ್ತು. ನಿನ್ನೆ ಬೆಳಿಗ್ಗೆ ಕುರುಡಪದವು ಲಾಲ್‌ಬಾಗ್ ರಸ್ತೆಯ ಚಿಪ್ಪಾರಿನಲ್ಲಿ ಘಟನೆ ನಡೆದಿದೆ. ಕುರುಡಪದವುನಿಂದ ಉಪ್ಪಳ ಭಾಗಕ್ಕೆ ತೆರಳುವ ಬಸ್ ಚಿಪ್ಪಾರುನಲ್ಲಿ ಕೆಟ್ಟು  ನಿಂತಿದೆ. ರಸ್ತೆ ಇಕ್ಕಟ್ಟಾಗಿದ್ದು, ಬದಿಯಲ್ಲಿ ಕಾಡು ಪೊದೆಗಳಾವರಿಸಿ ರುವುದರಿಂ ದಾಗಿ ಇನ್ನೊಂದು ವಾಹನಕ್ಕೆ ಸಂಚರಿ ಸಲು ಅಸಾಧ್ಯವಾಗಿತ್ತು. ಇದರಿಂದಾಗಿ ಈ ದಾರಿಯಲ್ಲಿ ಸಂಚರಿಸುವ ಬಸ್ ಸಹಿತ ಇತರ ವಾಹನಗಳ ಸಂಚಾರ ಮೊಟಕುಗೊಂಡಿತು. ರೋಗಿಗಳು ಸಹಿತ ಅನೇಕ ಮಂದಿ ತಮ್ಮ ಗುರಿಗೆ ತಲುಪಲು ಸಾಧ್ಯವಾಗದೆ ಪರದಾಡುವಂತಾಯಿತು. ಬಳಿಕ ಬಸ್ ಕಾರ್ಮಿಕರು, ಸ್ಥಳೀಯರು ಸೇರಿ ರಸ್ತೆ ಬದಿಯ ಕಾಡು ಪೊದೆಗಳನ್ನು ಕಡಿದು ತೆರವುಗೊಳಿಸಿ ವಾಹನ ಸಂಚಾರ ಆರಂಭಗೊಂಡಿದೆ. ಶೋಚನೀಯಾ ವಸ್ಥೆಯ, ಇಕ್ಕಟ್ಟಾದ  ಈ ರಸ್ತೆ  ಬಗ್ಗೆ ಸ್ಥಳೀಯರು ಹಲವುಬಾರಿ ಅಧಿಕಾರಿ ಗಳ ಗಮನ  ಸೆಳೆದಿದ್ದರೂ ಸ್ಪಂದಿಸಿಲ್ಲ ವೆಂದು ಸ್ಥಳೀಯರು ದೂರಿದ್ದಾರೆ.

RELATED NEWS

You cannot copy contents of this page