ಇಮಾಂ ಶಾಫಿ ಇಸ್ಲಾಮಿಕ್ ಅಕಾಡೆಮಿ ವಾರ್ಷಿಕ ಸಂಗಮ ನಾಳೆಯಿಂದ
ಕುಂಬಳೆ:ಇಮಾಂಶಾಫಿ ಇಸ್ಲಾ ಮಿಕ್ ಅಕಾಡೆಮಿ, ವಾರ್ಷಿಕ ಸಂಗಮ ನಾಳೆಯಿಂದ ೩ರವರೆಗೆ ಕುಂಬಳೆ ಬದ್ರಿಯ ನಗರ ಇಮಾಂಶಾಫಿ ಇಸ್ಲಾಮಿಕ ಅಕಾಡೆಮಿ ಕ್ಯಾಂಪಸ್‌ನಲ್ಲಿ ವಿವಿಧ ಕಾರ್ಯಕ್ರಮ ಗಳೊಂದಿಗೆ ನಡೆಯಲಿದೆ ಎಂದು ಸ್ವಾಗತ ಸಮಿತಿ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ನಾಳೆ ಬೆಳಿಗ್ಗೆ ೯ಕ್ಕೆ ಕೋಶಾಧಿಕಾರಿ ಹಾಜಿ ಮುಹಮ್ಮದ್ ಅರಬಿ ಧ್ವಜಾ ರೋಹಣಗೈಯ್ಯುವರು. ಕೆ.ಕೆ. ಮಾಹಿನ್ ಮುಸ್ಲಿಯಾರ್ ಸಿಯಾರತ್‌ಗೆ ನೇತೃತ್ವ ನೀಡುವರು. ಖತ್ಮುಲ್ ಖುರ್‌ಆನ್‌ಗೆ ಎನ್ ಪಿಎಂ ಸೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ನೇತೃತ್ವ ನೀಡುವರು. ರಾತ್ರಿ ೭ಕ್ಕೆ ಕೆ.ಎಸ್. ಅಲಿ ತಂಙಳ್ ಕುಂಬೋಳ್ ಉದ್ಘಾಟಿಸುವರು. ಎಂ.ಪಿ. ಮುಹಮ್ಮದ್ ಸಅದಿ ಅಧ್ಯಕ್ಷತೆ ವಹಿಸುವರು. ಮುಹಮ್ಮದ್ ಮದನಿ ತಂಙಳ್ ಮೊಗ್ರಾಲ್ ಪ್ರಾರ್ಥನೆ ನಡೆಸುವರು. ರಾತ್ರಿ ೮ಕ್ಕೆ ಬುರ್ದಾ ಮಜ್ಲಿಸ್, ಅಶ್ರಫ್ ರಹ್‌ಮಾನಿ ಚೌಕಿ ಪ್ರವಚನ ನೀಡುವರು. ಸಫ್ವಾನ್ ತಂಙಳ್ ಏಳಿಮಲ ಮಜ್ಲಿಸುನ್ನೂರ್‌ಗೆ ನೇತೃತ್ವ ನೀಡುವರು. ೨, ೩ರಂದು ವಿವಿಧ ಕಾರ್ಯಕ್ರಮ ನಡೆಯಲಿದ್ದು, ಹಲವು ಮಂದಿ ಗಣ್ಯರು ಭಾಗವಹಿಸು ವರು. ಈ ಬಗ್ಗೆ ನಡೆದ ಸುದ್ಧಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಎಂ.ಎಂ. ಇಸುದ್ದೀನ್ ಹಾಜಿ, ಬಿ.ಕೆ. ಅಬ್ದುಲ್ ಖಾದರ್ ಮುಸ್ಲಿಯಾರ್ ಸಹಿತ ಹಲವರು ಭಾಗವಹಿಸಿದರು.