ಇಷ್ಟ ಪ್ರಕಾರ ಜೀವಿಸಲು ಬಿಡದ ತಂದೆಯನ್ನು ಕಡಿದು ಕೊಲೆಗೈದ ಮಗ
ತಿರುವನಂತಪುರ: ಇಷ್ಟಪ್ರಕಾರ ಜೀವಿಸಲು ಬಿಡುತ್ತಿಲ್ಲವೆಂಬ ಕಾರಣ ದಿಂದ ತಂದೆಯನ್ನು ಪುತ್ರನೋರ್ವ ಕಡಿದು ಕೊಲೆಗೈದ ಘಟನೆ ತಿರುವನಂತಪುರ ವೆಳ್ಳರಡ ಎಂಬಲ್ಲಿ ನಡೆದಿದೆ. ಕಿಳಿಯೂರು ನಿವಾಸಿ ಜೋಸ್ (70) ಎಂಬವರು ಕೊಲೆಗೀಡಾದ ವ್ಯಕ್ತಿ. ಕೊಲೆಕೃತ್ಯದ ಬಳಿಕ ಪುತ್ರ ಪ್ರಜಿಲ್ (28) ಪೊಲೀ ಸ್ ಠಾಣೆಗೆ ತಲುಪಿ ಶರಣಾಗಿದ್ದಾನೆ.
ನಿನ್ನೆ ರಾತ್ರಿ 9.45ರ ವೇಳೆ ಈ ಭೀಕರ ಕೃತ್ಯ ನಡೆದಿದೆ. ಮಗನಿಂದ ಆಕ್ರಮಣಕ್ಕೀಡಾದ ಜೋಸ್‌ರ ಬೊಬ್ಬೆ ಕೇಳಿ ಪತ್ನಿ ಸುಶ್ಮ ತಲುಪಿ ನೋಡಿದಾಗ ಜೋಸ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ವಿಷಯ ತಿಳಿದು ಸ್ಥಳೀಯರು ತಲುಪಿ ನೋಡಿದಾಗ ಜೋಸ್ ಸಾವನ್ನಪ್ಪಿದ್ದರು. ಜೋಸ್‌ರ ಎದೆ ಹಾಗೂ ಕುತ್ತಿಗೆಗೆ ಉಂಟಾದ ಗಂಭೀರ ಇರಿತವೇ ಸಾವಿಗೆ ಕಾರಣವಾಗಿದೆ. ಘಟನೆಯನ್ನು ಕಂಡು ಪ್ರಜ್ಞೆ ತಪ್ಪಿ ಬಿದ್ದ ಸುಶ್ಮಾರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪೊಲೀಸರು ತಲುಪಿ ಮೃತದೇಹವನ್ನು ಪಾರಶಾಲ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಿದ್ದಾರೆ.
ಚೀನಾದಲ್ಲಿ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದ ಪ್ರಜಿಲ್ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದನು. ಕೋವಿಡ್ ಕಾರಣದಿಂದ ಊರಿಗೆ ಬಂದಿದ್ದ ಆತ ಬಳಿಕ ಮನೆಯಲ್ಲೇ ಇದ್ದನು. ತನ್ನ ಇಷ್ಟ ಪ್ರಕಾರ ವರ್ತಿಸಲು ತಂದೆ ವಿರೋಧಿಸಿದುದೇ ಕೊಲೆಗೈಯ್ಯಲು ಕಾರಣವೆಂದು ಪ್ರಜಿಲ್ ತಿಳಿಸಿದ್ದಾನೆ.
ಜೋಸ್ ವ್ಯಾಪಾರಿಯಾಗಿದ್ದರ. ಇವರ ಓರ್ವೆ ಪುತ್ರಿ ಪ್ರಜಿಲಳಿಗೆ ಮದುವೆಯಾಗಿದ್ದು ಚೆನ್ನೈಯಲ್ಲಿ ವಾಸಿಸುತ್ತಿದ್ದಾರೆ.