ಇ-ಚಲನ್ ಅದಾಲತ್ 18ರಿಂದ

ಕಾಸರಗೋಡು: ಕೇರಳ ಪೊಲೀಸ್, ಮೋಟಾರು ವಾಹನ ಇಲಾಖೆ ಜಂಟಿಯಾಗಿ ಇ-ಚಲನ್ ಮೂಲಕ ನೀಡಿದ ಕಾನೂನು ಉಲ್ಲಂಘನೆಗಿರುವ ದಂಡಗಳಲ್ಲಿ ಸೂಕ್ತ ಸಮಯದಲ್ಲಿ ದಂಡ ಪಾವತಿಸಲು ಸಾಧ್ಯವಾಗದೆ ಚಲನ್‌ಗಳು ಪ್ರಸ್ತುತ ನ್ಯಾಯಾಲಯ ದಲ್ಲಿರುವ, ಪ್ರೋಸಿಕ್ಯೂನ್ ಕ್ರಮಗಳಿಗೆ ಶಿಫಾರಸು ಮಾಡಿರುವುದನ್ನು ಹೊರತುಪಡಿಸಿ ಉಳಿದ ಎಲ್ಲಾ ಚಲನ್‌ಗಳಲ್ಲಿ ತೀರ್ಪು ಕಲ್ಪಿಸಲು ಅದಾಲತ್ ನಡೆಸಲಾಗುವುದು. ಕಾಸರಗೋಡು ಜಿಲ್ಲಾ ಪೊಲೀಸ್, ಮೋಟಾರು ವಾಹನ ಇಲಾಖೆ ಜಂಟಿಯಾಗಿ ನಗರಸಭಾ ಪುರಭವನದಲ್ಲಿ ಈ ತಿಂಗಳ 18, 19ರಂದು ಅದಾಲತ್ ನಡೆಸುತ್ತಿದೆ. ಅಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಸಾರ್ವಜನಿಕರಿಗೆ ದಂಡ ಪಾವತಿಸಬಹುದೆಂದು ಆರ್‌ಟಿಒ ಎನ್‌ಫೋರ್ಸ್‌ಮೆಂಟ್ ತಿಳಿಸಿದ್ದಾರೆ

You cannot copy contents of this page