ಈ ತಿಂಗಳಿಂದ ಎಲ್ಲಾ ರೇಶನ್ ಕಾರ್ಡ್‌ಗಳಿಗೂ ಸೀಮೆ ಎಣ್ಣೆ ವಿತರಣೆ

ತಿರುವನಂತಪುರ: ಕೇಂದ್ರ ಸರಕಾರ ಮಂಜೂರು ಮಾಡಿದ ಸೀಮೆ ಎಣ್ಣೆ ರಾಜ್ಯದಲ್ಲಿ ಈ ತಿಂಗಳಿAದ ವಿತರಿಸಲಾಗುವುದು. ಎಲ್ಲಾ ವಿಭಾಗ ರೇಶನ್ ಕಾರ್ಡ್ ಮಾಲಕರಿಗೆ ಹಾಗೂ ಪರಂಪರಾಗತ ಮೀನು ಕಾರ್ಮಿಕರ ಪರ್ಮಿಟ್ ಇರುವ ಮೀನುಗಾರಿಕಾ ಬೋಟ್ಗಳಿಗೆ ಸೀಮೆ ಎಣ್ಣೆ ಲಭಿಸಲಿದೆ.
ಕೇಂದ್ರದಿAದ ಲಭಿಸಿದ 5676 ಕಿಲೋ ಲೀಟರ್ (56.76 ಲಕ್ಷ ಲೀಟರ್)ನಲ್ಲಿ 5088 ಕಿಲೋ ಲೀಟರ್ (50.88 ಲಕ್ಷಲೀಟರ್) ಸೀಮೆ ಎಣ್ಣೆ ರೇಶನ್ ಅಂಗಡಿಗಳ ಮೂಲಕ ಬಾಕಿ ಜೂನ್ನಲ್ಲಿ ಮೀನುಗಾರಿಕಾ ಬೋಟ್ಗಳಿಗೆ ವಿತರಿಸಲಾಗುವುದು.
ಹಳದಿಕಾರ್ಡ್ ಮಾಲಕರಿಗೆ 1 ಲೀಟರ್, ಗುಲಾಬಿ, ನೀಲಿ, ಬಿಳಿ ಕಾರ್ಡ್ನ ಮಾಲಕರಿಗೆ ತಲಾ ಅರ್ಧ ಲೀಟರ್ನಂತೆ ಎಣ್ಣೆ ಲಭಿಸಲಿದೆ. ಇದು ಎಪ್ರಿಲ್ನಿಂದ ಜೂನ್ವರೆಗಿನ ಪ್ರಮಾಣವಾಗಿದೆ. ವಿದ್ಯುತ್ ಸಂಪರ್ಕವಿಲ್ಲದ ಮನೆಗಳಿಗೆ 6 ಲೀಟರ್ ಎಣ್ಣೆ ಲಭಿಸಲಿದೆ. ಹಳದಿ, ನೀಲಿ ಕಾರ್ಡ್ ಮಾಲಕರಿಗೆ ಕಳೆದ ಒಂದು ವರ್ಷದಿಂದ, ಇತರ ಕಾರ್ಡ್ ಮಾಲಕರಿಗೆ ಎರಡೂವರೆ ವರ್ಷಗ ಳಿಂದ ಸೀಮೆ ಎಣ್ಣೆ ವಿತರಣೆಯಾಗಿಲ್ಲ.
ವಿದ್ಯುತ್ತೀಕರಿಸದ ಮನೆಗಳೆಂದು ದಾಖಲಿಸಿದವುಗಳಲ್ಲಿ ಅನಧಿಕೃತ ರೇಶನ್ ಕಾರ್ಡ್ಗಳಿದ್ದಲ್ಲಿ ಅವುಗಳನ್ನು ಪತ್ತೆಹಚ್ಚಲು ರಾಜ್ಯ ರೇಶನಿಂಗ್ ಕಂಟ್ರೋಲರ್ಎಲ್ಲಾ ಜಿಲ್ಲಾ ಸಪ್ಲೈ ಆಫೀಸರ್ಗಳಿಗೆ ನಿರ್ದೇಶ ನೀಡಿದ್ದಾರೆ.

You cannot copy contents of this page