ಉತ್ತರಕ್ರಿಯೆಗೆ ಸಹಾಯಹಸ್ತ ಚಾಚಿದ ಸದಾಶಿವ ಶೆಟ್ಟಿ ಅಭಿಮಾನಿ ಸೇವಾ ಬಳಗ

ಪೈವಳಿಕೆ: ಬಾಯಾರು ಬೆರಿಪದವು ಸದಾಶಿವ ಶೆಟ್ಟಿ ಅಭಿಮಾನಿ ಸೇವಾ ಬಳಗದವರು ವಿವಿಧ ಸಹಾಯಹಸ್ತ ನೀಡುತ್ತಿದ್ದು, ಇತ್ತೀಚೆಗೆ ನಿಧನರಾದ ಬಳ್ಳೂರು ನಿವಾಸಿ ಚೋಮರ ಉತ್ತರಕ್ರಿಯೆಯ ವ್ಯವಸ್ಥೆ ಯನ್ನು ಮಾಡಿ  ಪ್ರಶಂಸೆಗೆ ಪಾತ್ರರಾಗಿದ್ದಾರೆ.  ಚೋಮ ರವರ ವೈದ್ಯಕೀಯ ಚಿಕಿತ್ಸೆ, ಮನೆ ದುರಸ್ತಿಗಳಿಗೆ ಈ ಮೊದಲು ಸೇವಾ ಬಳಗ ಸಹಾಯ ಮಾಡಿದ್ದು,  ನಿಧನದ ಬಳಿಕ ಅಂತ್ಯಕ್ರಿಯೆ ನಡೆಸಲು ಕುಟುಂಬ ಅಶಕ್ತವಾದ ಹಿನ್ನೆಲೆಯಲ್ಲಿ  ಬಳಗದ ವತಿಯಿಂದ ಆರ್ಥಿಕ ಸಹಾಯ ನೀಡಲಾಯಿತು.  

Leave a Reply

Your email address will not be published. Required fields are marked *

You cannot copy content of this page