ಉದ್ಯಮಿ ಸುಲೈಮಾನ್ ಬಳ್ಳೂರುರಿಗೆ ಜನ್ಮನಾಡಿನ ಗೌರವಾರ್ಪಣೆ
ಬಾಯಾರು: ಯು.ಆರ್.ಎಫ್ ಗ್ಲೋಬಲ್ ಅವಾರ್ಡ್ ಗಳಿಸಿದ ಜಿಲ್ಲೆ ಯ ಉದ್ಯಮಿ ಸುಲೈಮಾನ್ ಬಳ್ಳೂರು ರಿಗೆ ಜನ್ಮನಾಡಿನ ಗೌರವ ಸಲ್ಲಿಸಲಾ ಯಿತು. ಇದೇ ವೇಳೆ ಪೈವಳಿಕೆ ಪಂಚಾ ಯತ್ ವ್ಯಾಪ್ತಿಯ ಖ್ಯಾತ ವೈದ್ಯರಿಗೂ, ಆಶಾ ಕಾರ್ಯಕರ್ತೆಯರು ಹಸಿರು ಕ್ರಿಯಾಸೇನಾ ಸದಸ್ಯೆಯರಿಗೆ ಅಭಿನಂ ದನ ಕಾರ್ಯಕ್ರಮ ಬಾಯಾರುಪದವಿ ನಲ್ಲಿ ಜರಗಿತು. ಸಚಿವ ರಾಮಚಂದ್ರನ್ ಕಡನ್ನಪ್ಪಳ್ಳಿ ಉದ್ಘಾಟಿಸಿದರು. ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿ ದರು. ಜಿ.ಪಂ. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಉಪಾಧ್ಯಕ್ಷ ಶಾನವಾಸ್ ಪಾದೂರು, ಪೈವಳಿಕೆ ಪಂ. ಅಧ್ಯಕ್ಷೆ ಜಯಂತಿ ಕೆ, ಝಡ್.ಎ. ಕಯ್ಯಾರ್ ಭಾಗವಹಿಸಿದರು. ಅಬ್ದುಲ್ ರಝಾಕ್ ಚಿಪ್ಪಾರು ಸ್ವಾಗತಿಸಿ, ಪುರುಷೋತ್ತಮ ಬಳ್ಳೂರು ವಂದಿಸಿದರು.