ಉದ್ಯಾವರ ಸಾವಿರ ಜಮಾಯತ್ ವಾರ್ಷಿಕ ಹರಕೆ ಇಂದು ಆರಂಭ
ಮಂಜೇಶ್ವರ: ಉದ್ಯಾವರ ಸಾವಿರ ಜಮಾಯತ್ ವಾರ್ಷಿಕ ಹರಕೆ ಇಂದು ಆರಂಭಗೊಳ್ಳುವುದು. ೨೩ರಂದು ಸಮಾ ಪ್ತಿಗೊಳ್ಳಲಿದೆ. ಇಂದು ಜುಮುಅ ಬಳಿಕ ದರ್ಗಾ ಶರೀಫ್ ಸಮಿತಿ ಅಧ್ಯಕ್ಷ ಪೂಕುಂಞಿ ತಂಙಳ್ ಧ್ವಜಾರೋಹ ಣಗೈಯ್ಯು ವುದರೊಂದಿಗೆ ಕಾರ್ಯಕ್ರಮ ಆರಂಭಗೊಳ್ಳುವುದು. ನಾಳೆ ರಾತ್ರಿ 8.30ಕ್ಕೆ ಸಮಸ್ತ ಅಧ್ಯಕ್ಷ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸುವರು. ಜಮಾಯತ್ ಅಧ್ಯಕ್ಷ ಯು.ಕೆ. ಸೈಫುಲ್ಲಾ ತಂಙಳ್ ಅಧ್ಯಕ್ಷತೆ ವಹಿಸುವರು. ಕೀಚೇರಿ ಅಬ್ದುಲ್ ಗಫೂರ್ ಮೌಲವಿ ಪ್ರಧಾನ ಭಾಷಣ ಮಾಡುವರು. ಮುಂದಿನ ದಿನ ಗಳಲ್ಲಿ ಮಸೂದ್ ಸಖಾಫಿ ಗುಡ ಲ್ಲೂರ್, ಉಸ್ಮಾನ್ ಜೌಹರಿ, ಅನ್ವರ್ ಮುಹಿಯುದ್ದೀನ್ ಹುದವಿ, ನೌಫಲ್ ಸಖಾಫಿ ಕಳಸ ಮೊದಲಾದವರು ಪ್ರವಚನ ನೀಡುವರು. 23ರಂದು ರಾತ್ರಿ 8 ಗಂಟೆಗೆ ಸಮಾರೋಪ ಸಮಾರಂಭ ಜರಗಲಿದ್ದು, ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಉದ್ಘಾ ಟಿಸುವರು. ಅಬ್ದುಲ್ ರಹ್ಮಾನ್ ಮಸೂದ್ ಅಸ್‌ಹರಿ ಅಲ್‌ಬುಖಾರಿ ಸಾಮೂಹಿಕ ಪ್ರಾರ್ಥನೆಗೆ ನೇತೃತ್ವ ನೀಡುವರು. ಈ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಮಾಯತ್ ಅಧ್ಯಕ್ಷ ಯು.ಕೆ. ಸೈಫುಲ್ಲಾ ತಂಙಳ್, ಇಬ್ರಾಹಿಂ, ಪಳ್ಳಿಕುಂಞಿ ಹಾಜಿ ಸಹಿತ ಪದಾ ಧಿಕಾರಿಗಳು ಭಾಗವಹಿಸಿದರು.