ಉದ್ಯೋಗದಿಂದ ನಿವೃತ್ತಿ ವೇಳೆ ಲಭಿಸಿದ 10 ಲಕ್ಷ ರೂ. ಠೇವಣಿಯಿರಿಸಿರುವುದು ಕಾರಡ್ಕ ಸೊಸೈಟಿಯಲ್ಲಿ: ಹಿಂಪಡೆಯಲು ಸಾಧ್ಯವಾಗದೆ ವೃದ್ಧ ಆತಂಕದಲ್ಲಿ

ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚ ರಿಸ್ಟ್ ವೆಲ್ಫೇರ್ ಕೋ ಅಪರೇಟಿವ್ ಸೊಸೈಟಿಯಲ್ಲಿ ಠೇವಣಿಯಿರಿಸಿದ್ದ 10 ಲಕ್ಷ ರೂಪಾಯಿ ಮರಳಿ ಲಭಿಸದೆ ನಿವೃತ್ತ ಸರಕಾರಿ ನೌಕರ ಆತಂಕದ ಲ್ಲಿದ್ದಾರೆ. ಆದೂರು ನಿವಾಸಿಯೂ ಕಾಸರಗೋಡು ಬೀಜೋತ್ಪಾದನೆ ಕೇಂದ್ರದ ನಿವೃತ್ತ ನೌಕರನಾದ ವೃದ್ಧ ಇದೀಗ ಹಣ ಸಿಗದೆ ದುಃಖಿಸುತ್ತಿದ್ದಾರೆ. ನಿವೃತ್ತರಾಗುವ ವೇಳೆ ಲಭಿಸಿದ ಮೊತ್ತವನ್ನು ಸುರಕ್ಷಿತ ಕೇಂದ್ರವೆಂಬ ನೆಲೆಯಲ್ಲಿ ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ ಆಪರೇಟಿವ್ ಸೊಸೈ ಟಿಯಲ್ಲಿ ಠೇವಣಿಯಿರಿಸಿದ್ದರು. ಈ ಮೊತ್ತವನ್ನು ಕಳೆದ ಮೇ 9ರಂದು ಬೆಂಗಳೂರಿನಲ್ಲಿರುವ ಮಗ ಹಾಗೂ ಮಗಳ ಖಾತೆಗಳಿಗೆ ಕಾರಡ್ಕ ಸೊಸೈ ಟಿಯ ಖಾತೆ ಮೂಲಕ ಕಳುಹಿಸಿಕೊಡ ಲಾಗಿತ್ತು. ಮೊತ್ತ ಬೆಂಗಳೂರಿನ ಖಾತೆಗೆ ತಲುಪುವ ಮುಂಚೆ ಕಾರಡ್ಕ ಸೊಸೈಟಿಯ 4.76 ಕೋಟಿ ರೂಪಾಯಿ ಲಪಟಾ ಯಿಸಿದ ಪ್ರಕರಣ ಬೆಳಕಿಗೆ ಬಂದಿತ್ತು. ಸೊಸೈಟಿಯ ಖಾತೆಯಿಂದ ಬೆಂಗಳೂ ರಿನ ಖಾತೆಗಳಿಗೆ ಕಳುಹಿಸಿಕೊಟ್ಟ ಹಣದಲ್ಲಿ ಸಂಶಯ ಕಂಡುಬಂದ ಪೊಲೀಸರು ಖಾತೆಯನ್ನು ರದ್ದುಗೊಳಿ ಸಿದ್ದರು. ಇದರಿಂದ ಹಣ ಹಿಂಪಡೆ ಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅದೂರು ನಿವಾಸಿಯ ಮಕ್ಕಳು ತಂದೆಯನ್ನು ಸಂಪರ್ಕಿಸಿದ್ದರು. ಇದರೊಂದಿಗೆ ಸೊಸೈಟಿಯಲ್ಲಿ ನಡೆದ ವಂಚನೆ ಹಾಗೂ ಖಾತೆ ರದ್ದುಗೊಳಿಸಿ ರುವುದರ ಬಗ್ಗೆ ಖಾತೆಯ ಮಾಲಕನಿಗೂ ತಿಳಿದುಬಂದಿದೆ. ಅನಂತರ ಹಲವು ಬಾರಿ ಖಾತೆಯಲ್ಲಿರುವ ಹಣ ಹಿಂಪಡೆಯಲು ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿ ಸೊಸೈಟಿಯನ್ನು ಸಂಪರ್ಕಿ ಸಿದ್ದರು. ಆದರೆ ನಮಗೇನೂ ಮಾಡಲು ಸಾಧ್ಯವಿಲ್ಲವೆಂದು ಅಲ್ಲಿದ್ದವರು ತಿಳಿಸಿದ್ದಾರೆನ್ನಲಾಗಿದೆ. ಇದರಿಂದ ಸೊಸೈಟಿಯ  ಸೆಕ್ರಟರಿ ಹಾಗೂ ವಂಚನೆ ಪ್ರಕರಣದ ಆರೋಪಿಯನ್ನು ಜಿಲ್ಲಾ ಕ್ರೈಂಬ್ರಾಂಚ್ ಡಿವೈಎಸ್‌ಪಿ ಶಿಬು ಪಾಪಚ್ಚನ್ ಹಾಗೂ ತಂಡ ನಿನ್ನೆ ಮಾಹಿತಿ ಸಂಗ್ರಹಕ್ಕಾಗಿ ಸೊಸೈಟಿಗೆ ಕರೆ ತಂದಿದ್ದಾರೆ. ಈ ವಿಷಯ ತಿಳಿದು ಆದೂರು  ನಿವಾಸಿ ಬೆಳಿಗ್ಗಿನಿಂದಲೇ ಮುಳ್ಳೇರಿಯಲ್ಲಿರುವ ಸೊಸೈಟಿ ಮುಂದೆ ಕಾದು ನಿಂತಿದ್ದರು. ಪೊಲೀಸ್ ತಂಡ ಅಲ್ಲಿಗೆ ತಲುಪುವುದ ರೊಂದಿಗೆ ಅವರ ಬಳಿ ತನ್ನ ಸಂಕಷ್ಟವನ್ನು ವಿವರಿಸಿದರು.  ಅತ್ಯಗತ್ಯ ಕಾರ್ಯಗಳಿಗಾಗಿ ಬೆಂಗಳೂರಿನಲ್ಲಿರುವ ಮಕ್ಕಳಿಗೆ ಹಣ ಕಳುಹಿಸಿ ಕೊಟ್ಟಿರುವುದಾಗಿಯೂ ಹಣ ಹಿಂಪಡೆ ಯಲಿರುವ  ವ್ಯವಸ್ಥೆ ಏರ್ಪಡಿಸಬೇಕೆಂದು ಅವರು ವಿನಂತಿಸಿದರು. ಈ ವೇಳೆ ಸೂಕ್ತ ಪರಿಹಾರ ಮಾರ್ಗ ಕಂಡುಕೊಳ್ಳುವುದಾಗಿ ತಿಳಿಸಿ ಡಿವೈಎಸ್ಪಿ ದೂರುಗಾರನನ್ನು ಸಮಾಧಾನಪಡಿಸಿ ಕಳುಹಿಸಿದರು.

Leave a Reply

Your email address will not be published. Required fields are marked *

You cannot copy content of this page