ಉದ್ಯೋಗಸ್ಥರ ಅನಾಸ್ಥೆಯಿಂದಾಗಿ ಅರ್ಜಿಗಳಲ್ಲಿ ಪರಿಹಾರ ಉಂಟಾಗುತ್ತಿಲ್ಲ- ಆಂಟನಿರಾಜು

ಕಾಸರಗೋಡು: ಅಧಿಕಾರಿಗಳ ಅನಾಸ್ಥೆಯಿಂದಾಗಿ ಹಲವಾರು ಅರ್ಜಿಗಳು ಪರಿಹಾರವಾಗದೆ ಉಳಿದು ಕೊಂಡಿದೆ ಎಂದು ಶಾಸಕ ಆಂಟನಿ ರಾಜು ನುಡಿದರು. ಜನಸಾಮಾನ್ಯರು ನೀಡುವ ಅರ್ಜಿಗಳಲ್ಲಿನ ನ್ಯೂನತೆಗಳನ್ನು ಪರಿಹರಿಸಲು ಅಧಿಕಾರಿಗಳು ಮುಂದಾಗಬೇಕೆಂದು ಕೇರಳ ವಿಧಾನಸಭಾ ಸಮಿತಿ ಅಧ್ಯಕ್ಷನಾಗಿರುವ ಶಾಸಕರು ಆಗ್ರಹಿಸಿದರು. ಕೇರಳ ವಿಧಾನಸಭೆಯ ಅರ್ಜಿಗಳ ಬಗ್ಗೆ ಸಮಿತಿ ಕಾಸರಗೋಡಿನಲ್ಲಿ ನಡೆಸಿದ ಹೇಳಿಕೆ ದಾಖಲು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಭೂಹಕ್ಕು ಪತ್ರ ಲಭಿಸದೆ ಇರುವ ಹಲವಾರು ಅರ್ಜಿ ಗಳಲ್ಲಿ ಕ್ರಮ ಪೂರ್ತಿಗೊಳಿಸಲಾಯಿತು.

ಜಿಲ್ಲೆಯಿಂದ ಲಭಿಸಿದ ದೂರು ಗಳಲ್ಲಿ ಅತ್ಯಂತ ಹೆಚ್ಚು ಭೂಮಿಗೆ ಸಂಬಂಧಪಟ್ಟವುಗಳಾಗಿತ್ತು. ಹೊಸ ಹತ್ತು ದೂರುಗಳನ್ನು ಇದೇ ವೇಳೆ ಸ್ವೀಕರಿಸಲಾಯಿತು. ಒಟ್ಟು ೩೧ ದೂರುಗಳನ್ನು ಪರಿಗಣಿಸಲಾಯಿತು. ಸಮಿತಿ ಸದಸ್ಯರಾದ ಜಿ.ಎಸ್. ಜಯಲಾಲ್, ಎಂ. ರಾಜಗೋಪಾಲನ್, ತೋಟತ್ತಿಲ್ ರವೀಂದ್ರನ್, ಕೆ.ಕೆ. ರಮ ಎಂಬಿವರು ಹಾಗೂ ಶಾಸಕ ಎನ್.ಎ. ನೆಲ್ಲಿಕುನ್ನು, ಜಿಲ್ಲಾಧಿಕಾರಿ ಕೆ. ಇಂಭಶೇಖರ್, ಎಡಿಎಂ ಪಿ. ಅಖಿಲ್ ಎಂಬಿವರು ಸಭೆಯಲ್ಲಿ ಭಾಗವಹಿಸಿದರು.

RELATED NEWS

You cannot copy contents of this page