ಉದ್ಯೋಗ ಭರವಸೆಯೊಡ್ಡಿ ವಂಚನೆ: ಮಾಜಿ ಡಿವೈಎಫ್‌ಐ ನೇತಾರೆ ಸಚಿತಾ ರೈ ವಿರುದ್ಧ ಮತ್ತೊಂದು ಕೇಸು
ಮುಳ್ಳೇರಿಯ: ಉದ್ಯೋಗ ಭರವಸೆಯೊಡ್ಡಿ ಹಲವರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ ಮಾಜಿ ಡಿವೈಎಫ್‌ಐ ನೇತಾರೆ, ಶೇಣಿ ಬಲ್ತಕಲ್ಲು ನಿವಾಸಿ ಸಚಿತಾ ರೈ (27) ವಿರುದ್ಧ ಮತ್ತೊಂದು ಕೇಸು ದಾಖಲಾಗಿದೆ.
ಬೆಳ್ಳೂರು ಕಿನ್ನಿಂಗಾರು ನಿವಾಸಿ ಲೀಲಾವತಿ ಎಂಬವರು ನೀಡಿದ ದೂರಿನಂತೆ ಆದೂರು ಪೊಲೀಸರು ಈ ಕೇಸು ದಾಖಲಿಸಿಕೊಂಡಿದ್ದಾರೆ. ಲೀಲಾವತಿಯ ಪುತ್ರ ಚಂದ್ರಶೇಖರನಿಗೆ ಕರ್ನಾಟಕದ ಅಬಕಾರಿ ಇಲಾ ಖೆಯಲ್ಲಿ ಉದ್ಯೋಗ ದೊರಕಿ ಸುವುದಾಗಿ ತಿಳಿಸಿ ಸಚಿತಾ ರೈ ಮೂರೂವರೆ ಲಕ್ಷ ರೂಪಾಯಿ ಪಡೆದು ವಂಚಿಸಿರುವುದಾಗಿ ದೂರಲಾಗಿದೆ. 2022 ಜನವರಿ 9ರಿಂದ ಹಲವು ಬಾರಿಯಾಗಿ ಈ ಮೊತ್ತ ಪಡೆದುಕೊಂಡಿದ್ದಾಳೆ. ಆದರೆ ಅನಂತರ ಉದ್ಯೋಗವೂ ಲಭಿಸಿಲ್ಲ. ಇದರಿಂದ ನೀಡಿದ ಹಣವನ್ನು ಮರಳಿಸಿಲ್ಲವೆಂದು ದೂರಿನಲ್ಲಿ ಲೀಲಾವತಿ ತಿಳಿಸಿದ್ದಾರೆ.
ಇದರೊಂದಿಗೆ ಉದ್ಯೋಗ ಭರವಸೆಯೊಡ್ಡಿ ಹಣ ಪಡೆದು ವಂಚಿಸಿದ ಆರೋಪದಂತೆ ಸಚಿತಾ ರೈ ವಿರುದ್ಧ ವಿವಿಧ ಠಾಣೆಗಳಲ್ಲಾಗಿ ದಾಖಲಾದ ಕೇಸುಗಳ ಸಂಖ್ಯೆ 16ಕ್ಕೇರಿದೆ ಎಂದು ತನಿಖಾಧಿಕಾರಿ ಗಳು ತಿಳಿಸಿದ್ದಾರೆ. ಕುಂಬಳೆ ಪೊಲೀಸರು ದಾಖಲಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಸೆರೆಗೀಡಾದ ಸಚಿತಾ ರೈ ಈಗ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ರಿಮಾಂಡ್‌ನಲ್ಲಿದ್ದಾಳೆ.