ಉದ್ಯೋಗ ಭರವಸೆಯೊಡ್ಡಿ ಹಣ ಪಡೆದು ವಂಚನೆ ಆರೋಪಿಗಾಗಿ ಶೋಧ

ಕುಂಬಳೆ: ಮಿಲಿಟರಿಯಲ್ಲಿ ಉದ್ಯೋಗ ದೊರಕಿಸುವುದಾಗಿ ಭರವಸೆಯೊಡ್ಡಿ ಯುವಕನಿಂದ ಹಣ ಪಡೆದು ವಂಚಿಸಲಾಯಿತೆಂಬ ಆರೋಪದಂತೆ ಕೇಸು ದಾಖಲಿಸಿಕೊಂಡ ಕುಂಬಳೆ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. ನೀರ್ಚಾಲು ನಿವಾಸಿಯಾದ ರೋಶನ್ ಎಂಬವರು ನೀಡಿದ ದೂರಿನಂತೆ ಸುಧೀಶ್ ಎಂಬಾತನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದು, ಈತನನ್ನು ಪತ್ತೆಹಚ್ಚಲು ಶೋಧ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಸುಧೀಶ್ ಇಚ್ಲಂಗೋಡು ನಿವಾಸಿ ಅಲ್ಲವೆಂದೂ ಪೊಲೀಸರು ತಿಳಿಸಿದ್ದಾರೆ.

ಮಿಲಿಟರಿಯಲ್ಲಿ ಉದ್ಯೋಗ ದೊರಕಿಸುವುದಾ ಗಿ ಭರವಸೆಯೊಡ್ಡಿ ರೋಶನ್‌ರ ಕೈಯಿಂದ ಸುಧೀಶ್ 1,30,000 ರೂಪಾಯಿ ಪಡೆದುಕೊಂಡಿದ್ದನೆನ್ನಲಾ ಗಿದೆ. 2023 ಸೆ. 26ರಂದು ಹಣ ನೀಡಿದ್ದು, ಆದರೆ ಹಣ ಅಥವಾ ಉದ್ಯೋಗ ಲಭಿಸದ ಹಿನ್ನೆಲೆಯಲ್ಲಿ ರೋಶನ್ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದರು. ತಿದ್ದುಪಡಿ: ನಿನ್ನೆಯ ಸಂಚಿಕೆಯಲ್ಲಿ ಇಚ್ಲಂಗೋಡು ನಿವಾಸಿ ಸುಧೀಶ್ ಎಂಬಾತನ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿರುವುದಾಗಿ ಪ್ರಕಟಗೊಂಡಿದ್ದು, ಕಣ್ತಪ್ಪಿನಿಂದ ಉಂಟಾದ ತಪ್ಪಿಗಾಗಿ ವಿಷಾಧಿಸುತ್ತೇವೆ.   -ಸಂ.

RELATED NEWS

You cannot copy contents of this page