ಉದ್ಯೋಗ ಹೆಸರಲ್ಲಿ ಹಣ ಲಪಟಾವಣೆ: ಸಚಿತಾ ರೈ ವಿರುದ್ಧ ಮತ್ತೆರಡು ದೂರು ; 5 ಲಕ್ಷ ರೂ. ನೀಡಿದ ಯುವತಿಗೆ ನಕಲಿ ಸಂದರ್ಶನ ಕಾರ್ಡ್ ಕಳುಹಿಸಿ ವಂಚನೆ

ಕಾಸರಗೋಡು: ಉದ್ಯೋಗ ಭರವಸೆಯೊಡ್ಡಿ ಹಲವರಿಂದ ಲಕ್ಷಾಂತರ ರೂಪಾಯಿಗಳನ್ನು ಪಡೆದುಕೊಂಡ ಮಾಜಿ ಡಿವೈಎಫ್‌ಐ ನೇತಾರೆ, ಬಾಡೂರು ಎಎಲ್‌ಪಿ ಶಾಲೆಯ ಅಧ್ಯಾಪಿಕೆಯಾದ ಸಚಿತಾ ರೈ ವಿರುದ್ಧ ಬದಿಯಡ್ಕ ಪೊಲೀಸರಿಗೆ ಮತ್ತೆ ಎರಡು ದೂರುಗಳು ಲಭಿಸಿದೆ. ನಾರಂಪಾಡಿ  ಗೋಸಾಡದ ರಕ್ಷಿತಾ, ಉಕ್ಕಿನಡ್ಕ ಕಂಗಿಲದ ಸುಜಾತ ಎಂಬಿವರು ದೂರು ನೀಡಿದ್ದಾರೆ. ರಕ್ಷಿತಾರಿಂದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿರುವುದಲ್ಲದೆ ಕೇಸು ದಾಖಲಿಸಿಲ್ಲವೆಂಬ ಆರೋಪ ಉಂಟಾಗಿದೆ. ವಂಚನೆಗೆ ಸಂಬಂಧಿಸಿ ಈ ಹಿಂದೆ ದಾಖಲಿಸಿಕೊಂಡ ಕೇಸುಗಳೊಂದಿಗೆ ರಕ್ಷಿತಾರ ದೂರಿನ ಕುರಿತು ತನಿಖೆ ನಡೆಸುವುದಾಗಿ ಪೊಲೀಸ್ ಅಧಿಕಾರಿಗಳು ದೂರುದಾತೆ ಯೊಂದಿಗೆ ತಿಳಿಸಿದ್ದಾರೆನ್ನಲಾಗಿದೆ. ಇದು ವಂಚನಾ ಪ್ರಕರಣವನ್ನು ಬುಡಮೇಲುಗೊಳಿಸಲಿರುವ  ಪ್ರಯತ್ನದ ಭಾಗವಾಗಿದೆಯೆಂಬ ಸಂಶಯವನ್ನು ದೂರುದಾತೆ ವ್ಯಕ್ತಪಡಿಸಿದ್ದಾರೆ. ದೂರುದಾತೆಯಾದ  ರಕ್ಷಿತಾ ಹಾಗೂ ಹಣ ಲಪಟಾಯಿಸಿದ  ಸಚಿತಾ ಒಂದೇ ತರಗತಿಯಲ್ಲಿ ಕಲಿತವರಾಗಿದ್ದಾರೆ. ಈ ಪರಿಚಯದ ಮೇಲೆ ಹಣ ನೀಡಿರುವುದಾಗಿ ರಕ್ಷಿತಾ ತಿಳಿಸಿದ್ದಾರೆ. ಸಿಪಿಸಿಆರ್‌ಐಯಲ್ಲಿ ಕ್ಲಾರ್ಕ್ ಕೆಲಸ ದೊರಗಿಸಿಕೊಡುವುದಾಗಿ ತಿಳಿಸಿ 2022 ಡಿಸೆಂಬರ್ ಮೊದಲವಾರ ಒಂದು ಲಕ್ಷರೂಪಾಯಿಗಳನ್ನು ಸಚಿತಾ ರೈ  ತನ್ನ  ಖಾತೆಗೆ ಪಡೆದುಕೊಂಡಿದ್ದಾಳೆ. ಬಾಕಿ 4 ಲಕ್ಷ ರೂಪಾಯಿಯನ್ನು  ಮೂರು ಗಡುಗಳಾಗಿ ಆಕೆಗೆ ನೀಡಲಾಗಿದೆ. ಆದರೆ ಉದ್ಯೋಗ ಲಭಿಸದ ಹಿನ್ನೆಲೆಯಲ್ಲಿ  ವಿಚಾರಿಸಿದಾಗ  ಕರ್ನಾಟಕದಲ್ಲಿ ಕ್ಲಾರ್ಕ್ ಕೆಲಸ ದೊರಕಿಸುವುದಾಗಿ ತಿಳಿಸಿದ್ದಾಳೆಂದು ರಕ್ಷಿತಾ ಹೇಳಿದ್ದಾರೆ. ಈ ಮಧ್ಯೆ ತನ್ನ ಬದಲಾಗಿ  ಸಹೋದರ ಆಕಾಶ್‌ಗೆ ಉದ್ಯೋಗ ದೊರಕಿಸಬೇಕೆಂದು ತಿಳಿಸಲಾಯಿತು. ಇದಕ್ಕೆ ಒಪ್ಪಿದ ಸಚಿತಾಳಿಂದ ಹಲವು ತಿಂಗಳ ಕಾಲ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಮತ್ತೆ ಫೋನ್‌ನಲ್ಲಿ ಸಂಪರ್ಕಿಸಿದಾಗ ಕರ್ನಾಟಕದ ಸಂಸ್ಥೆಯೊಂದರಿಂದ ಇಂಟರ್‌ವ್ಯೂ ಕಾರ್ಡ್ ಕಳುಹಿಸಲಾಗಿದೆಯೆಂದೂ ಅದರಲ್ಲಿ ಭಾಗವಹಿಸಬಹುದೆಂದು ತಿಳಿಸಿದ್ದಳು. ಸಚಿತಾ ತಿಳಿಸಿದಂತೆ ಕೆಲವು ದಿನಗಳೊಳಗೆ ಪೋಸ್ಟ್ ಕಾರ್ಡ್ ಲಭಿಸಿದೆ. 2024 ಫೆಬ್ರವರಿ 22ರಂದು ಹುಬ್ಬಳ್ಳಿ ಯಲ್ಲಿ ನಡೆಯುವ ಸಂದರ್ಶನದಲ್ಲಿ  ಭಾಗ ವಹಿಸಬೇ ಕೆಂದು ಕಾರ್ಡ್‌ನಲ್ಲಿ ತಿಳಿಸಲಾ ಗಿದೆ. ಆದರೆ  ಸಂದರ್ಶನ ನಡೆಯುವುದಾಗಿ ತಿಳಿಸಿದ ದಿನದಂದು  ಮಧ್ಯಾಹ್ನ ಬಳಿಕವೇ ಇಂಟರ್‌ವ್ಯೂ ಕಾರ್ಡ್ ಲಭಿಸಿದೆ. ಈ ಕುರಿತು ಅಂಚೆ ಕಚೇರಿ ಯಲ್ಲಿ ವಿಚಾರಿಸಿದಾಗ ಕಾರ್ಡ್ ಕಳುಹಿಸಿರುವುದು ಹುಬ್ಬಳ್ಳಿಯಿಂದಲ್ಲ, ಕಾಸರಗೋಡಿನಿಂದ ಕಾರ್ಡ್ ಕಳುಹಿಸಲಾಗಿದೆಯೆಂದು ದೂರುದಾತೆಗೆ ತಿಳಿದುಬಂದಿದೆ. ಮಾತ್ರವಲ್ಲ  ಸಂದರ್ಶನ ನಡೆಯುವ ಸಂಸ್ಥೆಯ ಸೀಲು ಕೂಡಾ ಕಾರ್ಡ್‌ನಲ್ಲಿ ಇರಲಿಲ್ಲ. ಇದು ತನ್ನನ್ನು ಮೋಸಗೊ ಳಿಸಲು ಕಳುಹಿಸಿರುವುದಾಗಿ ದೂರುದಾತೆ ಆರೋಪಿಸಿದ್ದಾರೆ. ಕಂಗಿಲದ ಸುಜಾತ ಕಳೆದ ದಿನ ಸಚಿತಾ ವಿರುದ್ಧ ದೂರು ನೀಡಿದ್ದಾರೆ. ಕಾಸರಗೋಡಿನ ಸರಕಾರಿ ಕಚೇರಿಯಲ್ಲಿ ಉದ್ಯೋಗ ದೊರಕಿಸು ವುದಾಗಿ ತಿಳಿಸಿ 50 ಸಾವಿರ  ರೂಪಾಯಿ ಪಡೆದು ಕೊಂಡಿರುವು ದಾಗಿ ದೂರಿನಲ್ಲಿ ತಿಳಿಸಲಾಗಿದೆ. 

RELATED NEWS

You cannot copy contents of this page