ಉಪರಾಷ್ಟ್ರಪತಿ ಸೋಮವಾರ ಶಿವಗಿರಿಗೆ
ತಿರುವನಂತಪುರ: ಉಪರಾಷ್ಟ್ರಪತಿ ಜಗದೀಪ್ ಧನ್ ಕರ್ ಸೋಮವಾರ ತಿರುವನಂತಪುರಕ್ಕೆ ಆಗಮಿಸುವರು. ಶಿವಗಿರಿ ತೀರ್ಥಾ ಟನೆ ಉದ್ಘಾಟನೆಗಾಗಿ ತಲುಪುವ ಅವರನ್ನು ವಿಮಾನ ನಿಲ್ದಾಣದಲ್ಲಿ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಸ್ವಾಗತಿಸುವರು. ಶಿವಗಿರಿಯ ಕಾರ್ಯಕ್ರಮದ ಬಳಿಕ ಅಂದು ಅಪರಾಹ್ನ ಉಪರಾಷ್ಟ್ರಪತಿ ದೆಹಲಿಗೆ ಮರಳು ವರು. 31ರಂದು ಸಂಜೆ ೫ ಗಂಟೆಗೆ ಶಿವಗಿರಿಯಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನವನ್ನು ರಾಜ್ಯಪಾಲರು ಉದ್ಘಾಟಿಸುವರು. ಈ ಕಾರ್ಯಕ್ರಮದ ಬಳಿಕವೇ ರಾಜ್ಯಪಾಲ ಇಲ್ಲಿಂದ ತೆರಳುವರು. ಇದೇ ವೇಳೆ ನೂತನ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಆರ್ಲೇಕರ್ ಜನವರಿ ಮೊದಲ ವಾರ ಅಧಿಕಾರ ವಹಿಸಿಕೊಳ್ಳುವರು.