ಉಪ್ಪಳದಲ್ಲಿ ನಾಲ್ಕು ಅಂಗಡಿಗಳಿಂದ ಕಳವು: ತನಿಖೆ ತೀವ್ರ
ಉಪ್ಪಳ: ಉಪ್ಪಳ ಪೇಟೆಯ ನಾಲ್ಕು ಅಂಗಡಿಗಳಲ್ಲಿ ಕಳ್ಳರು ನುಗ್ಗಿ ಹಣ ಸಹಿತ ವಿವಿಧ ಸಾಮಾಗ್ರಿಗಳನ್ನು ಕಳವುಗೈದ ಪ್ರಕರಣದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಮಂಗಳ ವಾರ ರಾತ್ರಿ ಅಂಗಡಿಗಳಿಂದ ಕಳವು ನಡೆದಿದೆ. ಉಪ್ಪಳ ಪೇಟೆಯ ವೈಟ್ ಮಾರ್ಟ್, ಬಿ.ಕೆ. ಮಾರ್ಟ್, ಬ್ಯೂಟಿ ಪಾರ್ಲರ್, ಸಿಟಿ ಬ್ಯಾಗ್ ಎಂಬಿಡೆಗ ಳಲ್ಲಿ ಕಳವು ನಡೆದಿದೆ. ಈ ನಾಲ್ಕು ಅಂಗಡಿಗಳ ಬೀಗ ಮುರಿದು ಕಳ್ಳರು ಒಳಗೆ ನುಗ್ಗಿದ್ದಾರೆ. ಮುಖವಾಡ ಧರಿಸಿ ತಲುಪಿದ ಕಳ್ಳರು ವ್ಯಾಪಾರ ಸಂಸ್ಥೆಯೊಳಗಿದ್ದ ಮೇಜು ತೆರೆದು ಹಣ ತೆಗೆಯುವ ದೃಶ್ಯ ಸಿಸಿ ಟಿವಿಯಲ್ಲಿ ಪತ್ತೆಯಾಗಿದೆ. ಇದೇ ವೇಳೆ ಉಪ್ಪಳ ಪರಿಸರದಲ್ಲಿ ಕಳವು ಕೃತ್ಯ ಪುನರಾವರ್ತಿಸುತ್ತಿರುವುದು ಜನರಲ್ಲಿ ಆತಂಕ ಹುಟ್ಟಿಸಿದೆ.