ಉಪ್ಪಳ ಭಗವತಿ ಗೇಟ್‌ನಲ್ಲಿ ಕುಸಿದ ಸಾರ್ವಜನಿಕ ಬಾವಿ

ಉಪ್ಪಳ:  ನಿನ್ನೆ ಸಂಜೆ ವರೆಗೆ ನಾಗರಿಕರು ಕುಡಿಯುವ ನೀರು ಬಳಸುತ್ತಿದ್ದ ಸಾರ್ವಜನಿಕ ಬಾವಿಯೊಂದು ಇಂದು ಬೆಳಿಗ್ಗೆ ಅಪ್ರತ್ಯಕ್ಷಗೊಂಡಿದೆ.  ಮಂಗಲ್ಪಾಡಿ ಪಂಚಾಯತ್‌ನ  ಅಧೀನತೆಯಲ್ಲಿರುವ ಭಗವತೀ ಗೇಟ್ ಬಳಿಯ ಸಾರ್ವಜನಿಕ ಬಾವಿ ಪೂರ್ಣವಾಗಿ ಕುಸಿದುಬಿದ್ದಿದೆ. ನಿನ್ನೆ ರಾತ್ರಿ ಕುಸಿದಿರಬೇಕೆಂದು ಅಂದಾಜಿಸಲಾಗಿದೆ. ಇಂದು ಬೆಳಿಗ್ಗೆ ನೀರು ತೆಗೆಯಲೆಂದು ಸ್ಥಳೀಯರು ತಲುಪಿದಾಗ ಬಾವಿ ಕುಸಿದಿರುವುದು ಕಂಡುಬಂದಿದೆ. ಸುಮಾರು 50 ವರ್ಷಗಳಿಂದ 15 ಕುಟುಂಬಗಳು ಮಳೆಗಾಲ, ಬೇಸಿಗೆಕಾಲದಲ್ಲಿ ನೀರು ಸೇದುತ್ತಿದ್ದ ಬಾವಿಯಾಗಿದೆ ಇದು. ಆವರಣಗೋಡೆ ಸಹಿತ ಕುಸಿದುಬಿದ್ದಿದೆ.

ಕುನಿಲ್ ಶಾಲೆ ಬಸ್ ಬಾಡೂರಿನಲ್ಲಿ ಹೊಂಡಕ್ಕೆ ಪಲ್ಟಿ ಅದೃಷ್ಟವಶಾತ್ ಅಪಾಯದಿಂದ ಪಾರಾದ ವಿದ್ಯಾರ್ಥಿಗಳು

ಪುತ್ತಿಗೆ: ಬಾಡೂರಿನಲ್ಲಿ ಇಂದು ಬೆಳಿಗ್ಗೆ ಶಾಲಾ ಬಸ್ ಹೊಂಡಕ್ಕೆ ಮಗುಚಿಬಿದ್ದು ಅಪಘಾತವುಂಟಾಗಿದೆ. ಕುನಿಲ್ ಶಾಲೆಯ ಬಸ್ ಅಪಘಾತ ಕ್ಕೀಡಾಗಿದೆ. ಬಸ್‌ನಲ್ಲಿ ಚಾಲಕ, ಇಬ್ಬರು ವಿದ್ಯಾರ್ಥಿಗಳು ಹಾಗೂ ಓವೆ ಸಹಾಯಕಿ ಇದ್ದರು. ಅವರೆಲ್ಲ ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಬಾಡೂರುಪದವು ಸಮೀಪ ಅಪಘಾತವುಂಟಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಅಪಘಾ ತವುಂಟಾಗಿದೆ ಎಂದು ಸಂಶಯಿ ಸಲಾಗಿದೆ. ಅಪಘಾತ ಸುದ್ದಿ ತಿಳಿದು ನಾಗರಿಕರು ಸ್ಥಳಕ್ಕೆ ತಲುಪಿ ದರು. ಬೆಳಿಗ್ಗೆ ಶಾಲೆಗೆ ಮಕ್ಕಳನ್ನು ಕರೆದೊ ಯ್ಯಲು ತಲುಪಿದ್ದ ಬಸ್ ಅಪಘಾತಕ್ಕೀಡಾಗಿದೆ. 

RELATED NEWS

You cannot copy contents of this page