ಉಪ್ಪಳ: ಸುರಕ್ಷಾ ವಿದ್ಯಾಲಯ ಯೋಜನೆ ಉದ್ಘಾಟನೆ
ಉಪ್ಪಳ: ಉಪ್ಪಳ ಅಗ್ನಿಶಾಮಕದಳ ವ್ಯಾಪ್ತಿಯಲ್ಲಿ ‘ಸುರಕ್ಷಾ ವಿದ್ಯಾಲಯ’ ಯೋಜನೆಯ ಔಪಚಾರಿಕ ಉದ್ಘಾಟನೆ ಇತ್ತೀಚೆಗೆ ಮಂಗಲ್ಪಾಡಿ ಸರಕಾರಿ ಹೈಸ್ಕೂಲ್ನಲ್ಲಿ ನಡೆಯಿತು. ಪಂ. ಸದಸ್ಯ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ರುಬಿನ ನೌಫಲ್ ಉದ್ಘಾಟಿಸಿದರು. ಮುಖ್ಯೋಪಾಧ್ಯಾಯ ನೌಷಾದ್, ಅಧ್ಯಾಪಿಕೆ ಶರ್ಮಿಳ ಶುಭಕೋರಿದರು. ಉಪ್ಪಳ ಅಗ್ನಿಶಾಮಕದಳದ ಸ್ಟೇಶನ್ ಆಫೀಸರ್ ರಾಜೇಶ್ ಸ್ವಾಗತಿಸಿ, ಪಿ.ಆರ್. ಸಂದೀಪ್ ವಂದಿಸಿದರು. ಬಳಿಕ ಸಂದೀಪ್, ವಿಷ್ಣು, ವೈಶಾಖ್ ತರಗತಿ ನೀಡಿದರು.