ಉಪ್ಪಳ: ೩೩ ಕೆವಿ ಸಬ್ ಸ್ಟೇಶನ್‌ಗೆ ಅಗತ್ಯದ ಸ್ಥಳ ಶೀಘ್ರ ಪತ್ತೆ-ಶಾಸಕ

ಉಪ್ಪಳ: ದಿನದಿಂದ ದಿನಕ್ಕೆ ಬೆಳವಣಿಗೆಯಲ್ಲಿರುವ ಉಪ್ಪಳ ಪೇಟೆಯ ಹಾಗೂ ಪರಿಸರ ಪ್ರದೇಶಗಳಲ್ಲಿ ವಿದ್ಯುತ್ ಉಪಯೋಗ ಹೆಚ್ಚಾಗುತ್ತಿರುವ ಕಾರಣ ೩೩ ಕೆವಿ ಸಬ್ ಸ್ಟೇಶನ್ ಸ್ಥಾಪಿಸಲು ಬೇಕಾಗಿ ರುವ ಸ್ಥಳವನ್ನು ಕಂಡುಕೊಳ್ಳಲು ನವಂಬರ್‌ನಲ್ಲಿ ಮಂಗಲ್ಪಾಡಿ ಪಂಚಾಯತ್‌ನಲ್ಲಿ ಸರ್ವಪಕ್ಷ ಸಭೆ ನಡೆಸುವುದಾಗಿ ಶಾಸಕ ಎಕೆಎಂ ಅಶ್ರಫ್ ತಿಳಿಸಿದ್ದಾರೆ.

ಮಂಜೇಶ್ವರ ವಿಧಾನಸಭಾ ಮಂಡಲದ ಕೆ.ಎಸ್.ಇ.ಬಿ ಚಟು ವಟಿಕೆಗಳ ಬಗ್ಗೆ ಶಾಸಕರು ನಡೆಸಿದ ಸಭೆಯಲ್ಲಿ ಅವರು ಮಾತನಾಡು ತ್ತಿದ್ದರು. ಸೀತಾಂಗೋಳಿಯಲ್ಲಿ ಸಬ್ ಸ್ಟೇಶನ್‌ಗೆ ಬೇಕಾದ ಸ್ಥಳದ ಬಗ್ಗೆ ತೀರ್ಮಾನವಾಗಿದ್ದು, ಮಂಜೇಶ್ವರ, ಪೊಸೋಟು ಪ್ರದೇಶದ ವೋಲ್ಟೇಜ್  ಕ್ಷಾಮ ಪರಿಹರಿಸಲು ಎಸ್ಟಿಮೇಟ್ ಸಿದ್ಧಪಡಿಸಿ ೨೦೨೩-೨೪ ವರ್ಷದ ದ್ಯುತಿಯೋಜನೆಯಲ್ಲಿ ಸೇರಿಸಲು, ಇಚ್ಲಂಗೋಡು, ಬೈದಲ ಎಂಬೀ ಟ್ರಾನ್ಸ್ ಫಾರ್ಮರ್‌ಗಳಿಗೆ ಸುತ್ತು ಬೇಲಿ ನಿರ್ಮಿಸಲಿರುವ ಕ್ರಮಗಳನ್ನು ಕೈಗೊಳ್ಳಲು, ವರ್ಕಾಡಿ ಮಹಿಳಾ ಹಾಸ್ಟೆಲ್‌ಗೆ ವಿದ್ಯುತ್ ಸಂಪರ್ಕ ನೀಡಲು, ಮಂಗಲ್ಪಾಡಿಯ ತಾಲೂಕು ಆಸ್ಪತ್ರೆಯಲ್ಲಿ ಕಾರ್ಯಾಚರಿಸುವ ಡಯಾಲಿಸಿಸ್ ಸೆಂಟರ್‌ಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಉಂಟಾಗುವ ವಿದ್ಯುತ್ ಮೊಟಕನ್ನು ಇಲ್ಲದಂತೆ ಮಾಡಲು ಶಾಸಕರು ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಮಂಜೇಶ್ವರ ಬ್ಲೋಕ್ ಪಂ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಬ್ಲೋಕ್ ಪಂ. ಅಧ್ಯಕ್ಷೆ ಶಮೀನ ಟೀಚರ್, ಉಪಾಧ್ಯಕ್ಷ ಪಿ.ಬಿ. ಹನೀಫ್, ಮಂಜೇಶ್ವರ ಪಂ. ಉಪಾಧ್ಯಕ್ಷ ಸಿದ್ದಿಖ್, ಕೆ.ಎಸ್.ಇ.ಬಿ ಎಕ್ಸಿಕ್ಯೂಟಿವ್ ಇಂಜಿನಿಯರ್ ನಾಗರಾಜ ಭಟ್, ನಂದಕುಮಾರ್, ಮನೋಜ್ ಸಹಿತ ವಿದ್ಯುತ್ ಇಲಾಖೆಯ ವಿವಿಧ ಅಧಿಕಾರಿಗಳು ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page