ಉಬ್ರಂಗಳ ಶ್ರೀ ಐವರು, ಶ್ರೀ ವಿಷ್ಣುಮೂರ್ತಿ, ಶ್ರೀ ಚಾಮುಂಡಿ ದೈವಸ್ಥಾನದಲ್ಲಿ ಪುನಃಪ್ರತಿಷ್ಠಾ ಬ್ರಹ್ಮಕಲಶ, ಕಳಿಯಾಟ ಮಹೋತ್ಸವ 22ರಿಂದ


ಬದಿಯಡ್ಕ: ಉಬ್ರಂಗಳ ಶ್ರೀ ಐವರು, ಶ್ರೀ ವಿಷ್ಣುಮೂರ್ತಿ, ಶ್ರೀ ಚಾಮುಂಡಿ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ಕಳಿಯಾಟ ಮಹೋತ್ಸವ ಡಿ. 22ರಿಂದ 30ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
22ರಂದು ಬೆಳಿಗ್ಗೆ 7ಕ್ಕೆ ಭಜನೆ, ಸಂಜೆ 5.30ಕ್ಕೆ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯ ವರಿಗೆ ಪೂರ್ಣಕುಂಭ ಸ್ವಾಗತ, 6ಕ್ಕೆ ಕಲಾವೇದಿಕೆ ಉದ್ಘಾಟನೆ, ಧಾರ್ಮಿಕ ಸಭೆ, 6.30ಕ್ಕೆ ದೀಪಾರಾಧನೆ, 7ಕ್ಕೆ ವಾಸ್ತು ಪೂಜೆ, ರಾತ್ರಿ 8ಕ್ಕೆ ಕಾರ್ಯಕ್ರಮ ವೈವಿಧ್ಯ ನಡೆಯಲಿದೆ. 23ರಂದು ಬೆಳಿಗ್ಗೆ 7ಕ್ಕೆ ಭಜನೆ, 10ಕ್ಕೆ ಉಗ್ರಾಣ ಭರಣ, 11.30ಕ್ಕೆ ಗೋವಿಂದ ಭಟ್ ಬದಿಯಡ್ಕ ಮತ್ತು ಬಳಗದಿಂದ ತಾಳಮದ್ದಳೆ, ಅಪರಾಹ್ನ 2 ಗಂಟೆಗೆ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ಕ್ಷೇತ್ರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಹೊರಡಲಿದೆ. ಸಂಜೆ 5ಕ್ಕೆ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಯವರಿಗೆ ಪೂರ್ಣಕುಂಭ ಸ್ವಾಗತ, 6.30ಕ್ಕೆ ಬೇವಿಂಜೆ ಶ್ರೀವಿಷ್ಣುಮೂರ್ತಿ ಕೋಲ್ ಕ್ಕಳಿ ತಂಡದಿAದ ಕೋಲಾಟ, ಮಯಂ ಗರ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ ಕೈಕೊಟ್ಟಿ ಕಳಿ ತಂಡದಿAದ ಕೈಕೊಟ್ಟಿ ಕಳಿ, ರಾತ್ರಿ 8ಕ್ಕೆ ಗಜಾನನ ನಾಟ್ಯಾಲಯ ಮುಳ್ಳೇರಿಯ ಇವರಿಂದ ನಾಟ್ಯಶಿಲ್ಪ, 9.30ಕ್ಕೆ ಕಾuಟಿಜeಜಿiಟಿeಜರಪೊಯಿಲ್ ಸಫ್ದರ್ ಆಶ್ಮಿ ನಾಡನ್ ಕಲಾವೇದಿಕೆಯವರಿಂದ ನಾಡಂ ಪಾಟ್- ನಾಡನ್ ಕಲೆಗಳು, 24ರಂದು ಬೆಳಿಗ್ಗೆ 7.30ಕ್ಕೆ ಭಜನೆ, ಅಪರಾಹ್ನ 2ರಿಂದ ಯಕ್ಷಾಂತರAಗ ಪೆರ್ಲ ಇವರಿಂದ ಯಕ್ಷಗಾನ ತಾಳಮದ್ದಳೆ, ರಾತ್ರಿ 7.30ರಿಂದ ಬೋವಿಕಾನ ನಾಟ್ಯಾಂಜಲಿ ನೃತ್ಯ ಕಲಾಕ್ಷೇತ್ರದ ರಾಜೇಶ್ ನಾರಾಯಣನ್ ಮಾಸ್ತರ್ ಬಳಗದಿಂದ ನೃತ್ಯ ವೈವಿಧ, 9.30ಕ್ಕೆ ಮಾವಿನಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಕಲಾಸಂಘದಿAದ ಯಕ್ಷಗಾನ ಬಯಲಾಟ, 25ರಂದು ಬೆಳಿಗ್ಗೆ 5ಕ್ಕೆ ಗಣಪತಿ ಹೋಮ, ಪ್ರತಿಷ್ಠಾ ಪಾಣಿ, 10.12ಕ್ಕೆ ಶ್ರೀ ಐವರು, ಶ್ರೀ ವಿಷ್ಣುಮೂರ್ತಿ, ಶ್ರೀ ಪಡಿಂuಟಿಜeಜಿiಟಿeಜರ್ ಚಾಮುಂಡಿ, ಶ್ರೀ ನಾಗಬ್ರಹ್ಮ, ಶ್ರೀ ರಕ್ತೇಶ್ವರಿ, ಶ್ರೀ ಗುಳಿಗ ಮತ್ತು ಶ್ರೀ ಚೌಕಾರುಗುಳಿಗ ದೈವಗಳ ಪ್ರತಿಷ್ಠೆ, ಜೀವ ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ ನಡೆಯಲಿದೆ.
ಅಪರಾಹ್ನ 2 ಗಂಟೆಗೆ ಅಭಿಜ್ಞಾ ಕರಂದಕ್ಕಾಡ್ ಅವರಿಂದ ಯೋಗ ಪ್ರದರ್ಶನ, ಸುರೇಶ್ ಯಾದವ್ ಅವರಿಂದ ಮಿಮಿಕ್ರಿ ವನ್ಮೆನ್ ಶೋ, ಸಂಜೆ 6ಕ್ಕೆ ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ, 6.30ಕ್ಕೆ ಧಾರ್ಮಿಕ ಸಭೆ, ಅಭಿನಂದನಾ ಕಾರ್ಯಕ್ರಮ, ರಾತ್ರಿ 7.30ಕ್ಕೆ ಸ್ಥಾನಮನೆಯಿಂದ ದೈವಗಳ ಭಂಡಾರ ಕ್ಷೇತ್ರಾಂಗಣಕ್ಕೆ ಶೋಭಾಯಾ ತ್ರೆಯಾಗಿ ಬಂದ ಬಳಿಕ ದೈವಗಳ ನಡಾವಳಿ ಮಹೋತ್ಸವ, ದೈವಗಳ ತೊಡಂಙಲ್.
26ರAದು ಬೆಳಿಗ್ಗೆ 7ರಿಂದ ಭಜನೆ, 10.30ರಿಂದ ಪ್ರಸಿದ್ಧ ಕಲಾವಿದರಿಂದ ಗಾನವೈಭವ ನಡೆಯಲಿದೆ. ಅಪರಾಹ್ನ 3.30ಕ್ಕೆ ಕಳಿಯಾಟ ಆರಂಭಗೊ ಳ್ಳುವುದು. ಶ್ರೀ ದೈವಗಳ ಸ್ತೋತ್ರ, ವೆಳ್ಳಾಟ, ಶ್ರೀ ಪುಲ್ಲೂರ್ಣನ್ ದೈವ, ಶ್ರೀ ಕಾಳಪುಲಿ ಯನ್ ದೈವ, ಶ್ರೀ ಪುಲಿಕಂಡನ್ ದೈವ, ಶ್ರೀ ಕರಿಂದಿರಿ ನಾಯರ್ ದೈವಗಳ ಕಳಿಯಾಟ, ಬಿಂಬ ದರ್ಶನ, ಬಿಂಬ ಬಲಿ, ಹೊರೆಕಾಣಿಕೆ, ಅಚ್ಚನ್ಮಾರರ ದರ್ಶನ, ಶ್ರೀ ಪುಲಿಚ್ಚೇಗವನ್ ದೈವದ ಸ್ತೋತ್ರ, ಶ್ರೀ ಪುಲ್ಲೂರಾಳಿ ದೈವದ ಸ್ತೋತ್ರ, ಶ್ರೀ ವಿಷ್ಣುಮೂರ್ತಿ ದೈವದ ತೊಡಂಙಲ್ ಮತ್ತು ಕುಳಿಚ್ಚಾಟ, 27ರಂದು ಮುಂಜಾನೆ 4ಕ್ಕೆ ಶ್ರೀ ಪುಲಿಚ್ಚೇಗವನ್, ಶ್ರೀ ಕರಿಂದಿರಿ ನಾಯರ್, ಶ್ರೀ ಕಾಳಪುಲಿಯನ್, ಶ್ರೀ ಪುಲಿಕಂಡನ್, ಶ್ರೀ ಪುಲ್ಲೂರ್ಣನ್, ಶ್ರೀ ಪುಲ್ಲೂರಾಳಿ, ಶ್ರೀ ವಿಷ್ಣುಮೂರ್ತಿ ದೈವಗಳ ನರ್ತನ, ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ಕ್ಷೇತ್ರಕ್ಕೆ ಭೇಟಿ, ಕಲಶಾಟ್ ನಡೆಯಲಿದೆ.
ಅಪರಾಹ್ನ 2 ಗಂಟೆಗೆ ನಡುಕಳಿ ಯಾಟದಂಗವಾಗಿ ಶ್ರೀ ದೈವಗಳ ತೊಡಂಙಲ್, ಸಂಜೆ 4ರಿಂದ ಶ್ರೀ ದೈವಗಳ ಸ್ತೋತ್ರ, ವೆಳ್ಳಾಟ, ಶ್ರೀ ಪುಲ್ಲೂರ್ಣನ್, ಶ್ರೀ ಕಾಳಪುಲಿಯನ್, ಶ್ರೀ ಪುಲಿಕಂಡನ್ ದೈವಗಳ ನರ್ತನ, ಬಿಂಬ ದರ್ಶನ, ಬಿಂಬ ಬಲಿ, ಹೊರೆ ಕಾಣಿಕೆ, ಅಚ್ಚನ್ ಮಾರರ ದರ್ಶನ, ಶ್ರೀ ಪುಳ್ಳಿಕರಿಂಗಾಳಿ ದೈವದ ಸ್ತೋತ್ರ, ಶ್ರೀ ಪುಲ್ಲೂರಾಳಿ ದೈವದ ಸ್ತೋತ್ರ, ಶ್ರೀ ವಿಷ್ಣುಮೂರ್ತಿ ದೈವದ ತೊಡಂಙಲ್ ಮತ್ತು ಕುಳಿಚ್ಚಾಟ, 28ರಂದು ಮುಂಜಾನೆ 4ರಿಂದ ಧರ್ಮದೈವ ಶ್ರೀ ಪುಳ್ಳಿಕರಿಂಗಾಳಿ ಅಮ್ಮನವರ ನೃತ್ಯೋತ್ಸವ ಹಾಗೂ ಸಾವಿರ ದೀಪ ಮಹೋತ್ಸವ (ಆಯಿರತ್ತಿರಿ), ಶ್ರೀ ಕಾಳಪುಲಿಯನ್ ದೈವನರ್ತನ, ಶ್ರೀ ಪುಲಿಕಂಡನ್ ದೈವ ನರ್ತನ, ಕರ್ವಲ್ತಡ್ಕದಲ್ಲಿರುವ ಸೀಯಾಳ ಒಡೆಯುವ ಕಲ್ಲಿಗೆ ಶ್ರೀ ಪುಲಿಕಂಡನ್ ದೈವದ ಯಾತ್ರೆ, ಶ್ರೀ ಪುಲ್ಲೂರ್ಣನ್ ದೈವ, ಶ್ರೀ ಪುಲ್ಲೂರಾಳಿ ದೈವ, ಶ್ರೀ ವಿಷ್ಣುಮೂರ್ತಿ ದೈವಗಳ ನರ್ತನ, ಕಲಶಾಟ್ ನಡೆಯಲಿದೆ.
ಕೊನೆಯ ಕಳಿಯಾಟದಂಗವಾಗಿ ಸಂಜೆ 5 ಗಂಟೆಗೆ ದೈವಗಳ ತೊಡಂಙಲ್, ವೆಳ್ಳಾಟ, ಸ್ತೋತ್ರ, ಶ್ರೀ ಪುಲಿಕಂಡನ್ ದೈವ, ಶ್ರೀ ಕಾಳಪುಲಿಯನ್ ದೈವ, ಶ್ರೀ ಪುಲ್ಲೂರ್ಣನ್ ದೈವ, ಬಿಂಬ ದರ್ಶನ, ಬಿಂಬ ಬಲಿ, ಹೊರೆಕಾಣಿಕೆ, ಅಚ್ಚನ್ಮಾರರ ದರ್ಶನ, ಶ್ರೀ ಪುಲ್ಲೂರಾಳಿ ದೈವದ ಸ್ತೋತ್ರ, ವಿಷ್ಣುಮೂರ್ತಿ ದೈವದ ತೊಡಂಙಲ್ ಮತ್ತು ಕುಳಿಚ್ಚಾಟ, 29ರಂದು ಪ್ರಾತಃಕಾಲದಿಂದ ಶ್ರೀ ಕಾಳಪುಲಿಯನ್ ದೈವ, ಶ್ರೀ ಪುಲಿಕಂಡನ್ ದೈವ, ಶ್ರೀ ಪುಲ್ಲೂರಾಳಿ ದೈವ, ಶ್ರೀ ಪುಲ್ಲೂರ್ಣನ್ ದೈವಗಳ ನರ್ತನ, ಅರ್ತಿಪಳ್ಳದಲ್ಲಿರುವ ಸೀಯಾಳ ಒಡೆಯುವ ಕಲ್ಲಿಗೆ ಪುಲ್ಲೂರ್ಣನ್ ದೈವದ ಯಾತ್ರೆ, ಶ್ರೀ ವಿಷ್ಣುಮೂರ್ತಿ ದೈವ ನರ್ತನ ಮತ್ತು ಕುಂಡ್ಯಪ್ಪಾಡಿಯಲ್ಲಿರುವ ಸೀಯಾಳ ಒಡೆಯುವ ಕಲ್ಲಿಗೆ ದೈವದ ಯಾತ್ರೆ, ಶ್ರೀ ಪುಲ್ಲೂರ್ಣನ್ ದೈವ ಹೂಮುಡಿ ಅವರೋಹಣ, ಶ್ರೀ ಗುಳಿದ ದೈವದ ನರ್ತನ, ಸಂಜೆ 7.30ರಿಂದ ಜ್ವಾಲಾ ಉಬ್ರಂಗಳ ಹಾಗೂ ಪಾಂಚಜನ್ಯ ಜಯನಗರ ತಂಡದಿAದ ಕೈಕೊಟ್ಟಿ ಕಳಿ, ರಾತ್ರಿ 8.30ಕ್ಕೆ ಸಂಗೀತ ವಿದ್ವಾನ್ ಯೋಗೀಶ್ ಶರ್ಮ ಬಳ್ಳಪದವು ಅವರಿಂದ ಗಾನಸುಧಾ ಸಂಗೀತ ಕಾರ್ಯಕ್ರಮ, 10ರಿಂದ ಸ್ಥಾನಮನೆ ಯಲ್ಲಿ ಶ್ರೀ ಪಡಿuಟಿಜeಜಿiಟಿeಜರ್ ಚಾಮುಂಡಿ ದೈವದ ಭಂಡಾರ ತೆಗೆಯುವುದು, ದೈವದ ತೊಂಙಲ್, ಮೋಂದಿಕೋಲ, 30ರಂದು ಬೆಳಿಗ್ಗೆ 9ರಿಂದ ಶ್ರೀ ಪಡಿಂuಟಿಜeಜಿiಟಿeಜರ್ ಚಾಮುಂಡಿ ದೈವದ ನೃತ್ಯೋತ್ಸವ, ಮಧ್ಯಾಹ್ನ 1 ಗಂಟೆಗೆ ಶ್ರೀ ಚೌಕಾರು ಗುಳಿಗ ದೈವ ನರ್ತನ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page