ಉರೂಸ್‌ನ ಫ್ಲೆಕ್ಸ್ ಬೋರ್ಡ್ ನಾಶಗೊಳಿಸಿ ಕೋಮು ಗಲಭೆಗೆ ಸಂಚು: ಇಬ್ಬರು ಆರೋಪಿಗಳ ಬಂಧನ

ಕುಂಬಳೆ: ಉರೂಸ್ ಕಾರ್ಯಕ್ರಮದ ಪ್ರಚಾರಾರ್ಥ ಸ್ಥಾಪಿಸಿದ್ದ ಫ್ಲೆಕ್ಸ್ ಬೋರ್ಡ್ ಉದ್ದೇಶಪೂರ್ವಕ ನಾಶಗೊಳಿಸಿ ನಾಡಿನಲ್ಲಿ ಕೋಮು ಗಲಭೆ ಸೃಷ್ಟಿಸಲು ಪ್ರಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕುಂಬಳೆ ಠಾಣೆ ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.

ಪಚ್ಚಂಬಳ ನಿವಾಸಿ ಫಾಯಿಸ್ (19), ಅಡ್ಕ ವೀರನಗರ ನಿವಾಸಿ ಅಬ್ದುಲ್ ಶರೀಕ್ (27) ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ.

ಕಳೆದ ಮೇ ೧ರಂದು ಪ್ರಕರಣಕ್ಕೆ  ಕಾರಣವಾದ ಘಟನೆ ನಡೆದಿದೆ. ವಳಯಂ ಮಖಾಂ ಉರೂಸ್‌ನ ಪ್ರಚಾರಾರ್ಥ ಅಡ್ಕ ವೀರನಗರದಲ್ಲಿ  ಸ್ಥಾಪಿಸಿದ್ದ ಫ್ಲೆಕ್ಸ್ ಬೋರ್ಡ್ ಮೇ 1ರಂದು ರಾತ್ರಿ ನಾಶಗೊಳಿಸಲಾಗಿತ್ತು. ಈ ಬಗ್ಗೆ ಉರೂಸ್ ಸಮಿತಿ  ಪದಾಧಿಕಾರಿಗಳು ಕುಂಬಳೆ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ  ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದರು. ಇದೇ ಸಂದರ್ಭದಲ್ಲಿ ಫ್ಲೆಕ್ಸ್ ಬೋ ರ್ಡ್ ಹರಿದಿರುವುದು ಫಾಯಿಸ್ ಆಗಿದ್ದಾನೆಂದು ನಾಗರಿಕರು ಸಂಶಯಿಸಿ ದ್ದರು. ಈ ಬಗ್ಗೆ ಅವರು ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ನಡೆಸಿದ ತನಿಖೆಯಲ್ಲಿ ಅದನ್ನು  ಖಚಿತಪಡಿ ಸಲಾಗಿತ್ತು.

ಇದೇ ವೇಳೆ  ಫಾಯಿಸ್ ಘಟನೆಯ ಮರುದಿನವೇ ಮುಂಬೈಗೆ ಪರಾರಿಯಾಗಿ ಅಲ್ಲಿ ಕೆಲಸ ನಿರ್ವಹಿ ಸುತ್ತಿರುವ  ಅಬ್ದುಲ್ ಶರೀಕ್‌ನೊಂ ದಿಗೆ ವಾಸಿಸತೊಡಗಿದ್ದನು. ಇದರಂತೆ ಫಾಯಿಸ್‌ನ ಪತ್ತೆಗಾಗಿ ಕ್ರಮ ಆರಂಭಿಸಿದ್ದರು.

ಇದೇ ಸಂದರ್ಭದಲ್ಲಿ ಈತಿಂಗಳ 4ರಂದು ಫಾಯಿಸ್ ಹಾಗೂ ಅಬ್ದುಲ್ ಶರೀಕ್ ಊರಿಗೆ ಬಂದಿದ್ದರು. ಈ ಬಗ್ಗೆ ಮಾಹಿತಿ ಲಭಿಸಿದ ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್  ಕುಮಾರ್, ಪ್ರೊಬೆಶನರಿ ಎಸ್‌ಐ ಅನಂತಕೃಷ್ಣನ್, ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಮನು, ವಿನೋದ್ ಎಂಬಿವರು ನಿನ್ನೆ ಸಂಜೆ ನಡೆಸಿದ ಕಾರ್ಯಾಚರಣೆಯಲ್ಲಿ  ಫಾಯಿಸ್‌ನನ್ನು ಪಚ್ಚಂಬಳದಿಂದ ಸೆರೆಹಿಡಿಯಲಾಗಿದೆ. ಫಾಯಿಸ್‌ನನ್ನು ಪೊಲೀಸರು ತನಿಖೆಗೊಳಪಡಿಸಿದಾಗ ಉರೂಸ್‌ನ ಫ್ಲೆಕ್ಸ್ ಬೋರ್ಡ್ ನಾಶ ಗೊಳಿಸಲು ತಿಳಿಸಿರುವುದು ಅಬ್ದುಲ್ ಶಾರೀಕ್ ಆಗಿದ್ದಾನೆಂದು ತಿಳಿದುಬಂ ದಿದೆ. ಇದರಂತೆ ಇಂದು ಮುಂಜಾನೆ ಪೊಲೀಸರು ಅಡ್ಕ ವೀರನಗರದಿಂದ ಅಬ್ದುಲ್ ಶಾರೀಕ್‌ನನ್ನು ಬಂಧಿಸಿದ್ದಾರೆ. ಬಂಧಿತರನ್ನು ಪೊಲೀಸರು ಸಮಗ್ರ ತನಿಖೆಗೊಳಪಡಿಸುತ್ತಿದ್ದಾರೆ. ಇಂದು ನ್ಯಾಯಾಲಯದಲ್ಲಿ ಹಾಜರು ಪಡಿಸಲಿದ್ದಾರೆ.

You cannot copy contents of this page