ಉಳ್ಳಾಲ ಕೋಟೆಕಾರ್ ಬ್ಯಾಂಕ್ ಕಳವು: ಮತ್ತೆ 4 ಮಂದಿ ಸೆರೆ
ತಲಪಾಡಿ: ಉಳ್ಳಾಲ ಕೋಟೆ ಕಾರ್ ಸಹಕಾರಿ ಬ್ಯಾಂಕ್‌ನ ಕೆ. ಸಿ. ರೋಡ್ ಬ್ಯಾಂಕ್‌ನಿಂದ ಕಳವುಗೈದ ಘಟನೆಯಲ್ಲಿ ಮತ್ತೆ ನಾಲ್ಕು ಮಂದಿಯನ್ನು ಸೆರೆ ಹಿಡಿಯಲಾಗಿದೆ. ಇಬ್ಬರನ್ನು ತಮಿಳುನಾಡಿನಿಂದ ಹಾಗೂ ಮತ್ತಿಬ್ಬರನ್ನು ಮುಂಬಯಿಯಿಂದ ಸೆರೆ ಹಿಡಿಯಲಾಗಿದೆ ಎಂದು ತಿಳಿದು ಬಂದಿದೆ. ಆರೋಪಿಗಳನ್ನು ಮಂಗಳೂರಿಗೆ ಕರೆತರಲು ಇನ್ನಷ್ಟು ಹೆಚ್ಚಿನ ಪೊಲೀಸ್ ತಂಡವನ್ನು ಎರಡು ಕಡೆಗಳಿಗೆ ಕಳುಹಿಸಿಕೊಡಲಾಗಿದೆ. 10 ಮಂದಿಯ ತಂಡ ಬ್ಯಾಂಕ್ ದರೋಡೆಗೈದಿರುವುದಾಗಿ ಮಾಹಿತಿ ಲಭಿಸಿತ್ತು. ಕಳವಿನಲ್ಲಿ ನೇರವಾಗಿ ಭಾಗಿಯಾದ ಮೂರು ಮಂದಿಯನ್ನು ಈ ಮೊದಲೇ ಬಂಧಿಸಲಾಗಿತ್ತು. ಕಳವು ನಡೆಸಿದ ಬಳಿಕ ಕಳ್ಳರು ಚಿನ್ನಾಭರಣಗಳನ್ನು ಪಾಲು ಮಾಡಿ ತಮಿಳುನಾಡಿಗೆ ಪರಾರಿಯಾಗಿ ರಬೇಕೆಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಸೆರೆಯಾದ ಇಬ್ಬರಿಂದ ಕಳವುಗೈದ ಚಿನ್ನಾಭರಣದ ಒಂದು ಪಾಲನ್ನು ವಶಪಡಿಸಿರುವುದಾಗಿಯೂ ಮಾಹಿತಿಯಿದೆ.
ಈ ಮಧ್ಯೆ ನಿನ್ನೆ ಮಂಗಳೂರಿಗೆ ತಲುಪಿದ ಆರೋಪಿಗಳಾದ ಮುರುಗನ್ ದೇವರ್, ರಾಜೇಂದ್ರನ್ ಎಂಬಿವರನ್ನು ಉಳ್ಳಾಲ ಪೊಲೀಸರು ಜೆಎಂಎಫ್‌ಸಿ(4) ನ್ಯಾಯಾಲಯದಲ್ಲಿ ಹಾಜರುಪಡಿಸಿದರು.