ಉಸಿರಾಟ ತೊಂದರೆಯುವತಿ ಮೃತ್ಯು
ನೀರ್ಚಾಲು: ಯುವತಿ ಉಸಿರಾಟ ತೊಂದರೆಯಿಂದ ಮೃತಪಟ್ಟ ಘಟನೆ ನಡೆದಿದೆ. ಮಾನ್ಯ ಉಳ್ಳೋಡಿ ಬಳಿಯ ಮುಳಿಪರಂಬ್ ಎಂಬಲ್ಲಿನ ಸತೀಶ್ ಎಂಬವರ ಪತ್ನಿ ಸವಿತ (46) ಮೃತಪಟ್ಟ ಯುವತಿ. ಮೊನ್ನೆ ರಾತ್ರಿ ಇವರಿಗೆ ಕೆಮ್ಮು ಹಾಗೂ ಉಸಿರಾಟ ತೊಂದರೆ ಕಾಣಿಸಿಕೊಂಡಿತ್ತೆನ್ನಲಾಗಿದೆ. ಕೂಡಲೇ ಇವರನ್ನು ಚೆಂಗಳದ ಆಸ್ಪತ್ರೆಗೆ ತಲುಪಿಸಿದ್ದು, ಅಷ್ಟರೊಳಗೆ ನಿಧನ ಸಂಭವಿಸಿದೆ. ನಿನ್ನೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಮನೆಗೆ ಕೊಂಡೊಯ್ದು ಅಂತ್ಯ ಸಂಸ್ಕಾರ ನಡೆಸಲಾಯಿತು.
ಕಡಂಬಾರ್‌ಕಟ್ಟೆಯ ಶಂಕರ- ಕಮಲ ದಂಪತಿಯ ಪುತ್ರಿಯಾದ ಸವಿತ ಪತಿ, ಮಕ್ಕಳಾದ ಅನುಪ್ರಿಯ, ಆರಾಧ್ಯ, ಸಹೋದರ-ಸಹೋದರಿಯರಾದ ಅಶೋಕ, ರವಿ, ಶಾಂತಿ, ಶಾರದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.